ಗಂಗಾವತಿ: ಪರಿಶಿಷ್ಟ ಜಾತಿ ಮೀಸಲಾತಿ ಪಟ್ಟಿಯಲ್ಲಿರುವ ಲಂಬಾಣಿ ಸಮುದಾಯವನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು ಎಂದು ಆಗ್ರಹಿಸಿ ತಾಲೂಕಿನ ಬಂಜಾರ ಮತ್ತು ಲಮಾಣಿ ಸಮುದಾಯದ ಮುಖಂಡರು ಪತ್ರ ಚಳವಳಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
ಲಂಬಾಣಿಗಳನ್ನ ಎಸ್ಸಿ ಪಟ್ಟಿಯಿಂದ ಕೈಬಿಡಬೇಡಿ: ಸಿಎಂಗೆ ಪತ್ರ ಚಳವಳಿ ಮೂಲಕ ಒತ್ತಾಯ - ಗಂಗಾವತಿ ಎಸ್ಸಿ ಪಟ್ಟಿಯಿಂದ ಕೈಬಿಡದಂತೆ ಸಿಎಂಗೆ ಪತ್ರ ಸುದ್ದಿ
ಲಂಬಾಣಿ ಸಮುದಾಯದ ಎಲ್ಲ ಕುಟುಂಬಗಳಿಂದ ಸಿಎಂಗೆ ಪತ್ರ ಬರೆಯುವ ಮೂಲಕ ಎಸ್ಸಿ ಪಟ್ಟಿಯಿಂದ ಕೈಬಿಡದಂತೆ ಒತ್ತಾಯಿಸುವ ಚಳವಳಿ ಗಂಗಾವತಿ ತಾಲೂಕಿನಲ್ಲಿ ಆರಂಭವಾಗಿದೆ.

ಸಿಎಂಗೆ ಪತ್ರ ಚಳುವಳಿ
ಪತ್ರ ಚಳವಳಿ ಮೂಲಕ ಸಿಎಂಗೆ ಒತ್ತಾಯ
ತಾಲೂಕಿನಲ್ಲಿರುವ ಲಂಬಾಣಿ ಸಮುದಾಯದ ಎಲ್ಲ ಕುಟುಂಬದಿಂದ ತಲಾ ಒಂದು ಪತ್ರದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿರುವ ಮುಖಂಡರು, ಇಲ್ಲಿನ ಪ್ರಧಾನ ಅಂಚೆ ಕಚೇರಿಯಲ್ಲಿ ಪತ್ರಗಳನ್ನು ಪೋಸ್ಟ್ ಮಾಡುವ ಮೂಲಕ ಸರ್ಕಾರಕ್ಕೆ ರವಾನಿಸಿದರು.
ಯಾರೋ ಒಂದಿಬ್ಬರು ವ್ಯಕ್ತಿಗಳು ಕೊರಮ, ಕೊರಚ ಹಾಗೂ ಲಂಬಾಣಿ ಸಮುದಾಯವನ್ನು ಎಸ್ಸಿ ಪಟ್ಟಿಯಿಂದ ಕೈಬಿಡಬೇಕು ಎಂದು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಈ ಬಗ್ಗೆ ಸರ್ಕಾರ ಯಾವುದೇ ಕಾರಣಕ್ಕೂ ಸಮುದಾಯಕ್ಕೆ ಅನ್ಯಾಯ ಮಾಡಬಾರದು ಎಂದು ಆಗ್ರಹಿಸಿ ಮುಖಂಡರು ಪತ್ರ ಚಳವಳಿ ನಡೆಸಿದರು.
Last Updated : Jun 10, 2020, 3:52 PM IST