ಕುಷ್ಟಗಿ:ಕೊರೊನಾ ವೈರಸ್ ನಿಯಂತ್ರಿಸಲು ಲಾಕ್ಡೌನ್ ಸಡಿಲಿಕೆ ಬದಲಿಗೆ ಇನ್ನು 15 ದಿನಗಳವರೆಗೆ ಯಥಾ ಪ್ರಕಾರ ಮುಂದುವರೆದರೆ ಒಳಿತು ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
15 ದಿನ ಲಾಕಡೌನ್ ಮುಂದುವರಿಯಲಿ: ಶಾಸಕ ಅಮರೇಗೌಡ ಪಾಟೀಲ - MLA Amaregauda Patil
ಜನರ ಆರ್ಥಿಕ ಸ್ಥಿತಿ ಕುಂದ ಬಾರದು ಎನ್ನುವ ಉದ್ದೇಶದಿಂದ ಷರತ್ತು ಬದ್ಧ ಲಾಕ್ಡೌನ್ ಸಡಿಲಿಕೆ ನಿರ್ಧಾರವನ್ನು ಸರ್ಕಾರ ಈಗಲೇ ಕೈಗೊಳ್ಳಬಾರದಾಗಿತ್ತು. ಆಯಾ ಜಿಲ್ಲೆಗಳ ವಾಹನಗಳ ಸಂಚಾರ, ಜನ ಸಂಚಾರ ಬಗ್ಗೆ ಎಷ್ಟೇ ಜಾಗೃತಿ ವಹಿಸಿದರೂ ಕೊರೊನಾ ವ್ಯಾಪಿಸುವ ಸಾಧ್ಯತೆಗಳಿವೆ ಎಂದು ಶಾಸಕ ಅಮರೇಗೌಡ ಪಾಟೀಲ್ ಆತಂಕ ವ್ಯಕ್ತಪಡಿಸಿದರು.
![15 ದಿನ ಲಾಕಡೌನ್ ಮುಂದುವರಿಯಲಿ: ಶಾಸಕ ಅಮರೇಗೌಡ ಪಾಟೀಲ ಅಮರೇಗೌಡ ಪಾಟೀಲ](https://etvbharatimages.akamaized.net/etvbharat/prod-images/768-512-6984194-thumbnail-3x2-yjyj---copy.jpg)
ಈ ಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಜನರ ಆರ್ಥಿಕ ಸ್ಥಿತಿ ಕುಂದ ಬಾರದು ಎನ್ನುವ ಉದ್ದೇಶದಿಂದ ಷರತ್ತು ಬದ್ಧ ಲಾಕ್ಡೌನ್ ಸಡಿಲಿಕೆಯ ನಿರ್ಧಾರವನ್ನು ಸರ್ಕಾರ ಈಗಲೇ ಕೈಗೊಳ್ಳಬಾರದಾಗಿತ್ತು. ಆಯಾ ಜಿಲ್ಲೆಗಳ ವಾಹನಗಳ ಸಂಚಾರ, ಜನ ಸಂಚಾರ ಬಗ್ಗೆ ಎಷ್ಟೇ ಜಾಗೃತಿ ವಹಿಸಿದರು ಕೊರೊನಾ ವ್ಯಾಪಿಸುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಕೊರೊನಾ ವೈರಸ್ ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ವೈದ್ಯಕೀಯ ಸಿಬ್ಬಂದಿ, ಪೋಲೀಸರು, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು ಕೊಪ್ಪಳ ಜಿಲ್ಲೆ ಹಸಿರು ವಲಯವಾಗಿದ್ದರೂ, ಸಾಕಷ್ಟು ನಿಗಾವಹಿಸಿದ್ದೇವೆ ಎಂದರು.