ಕುಷ್ಟಗಿ (ಕೊಪ್ಪಳ):99 ಸಮುದಾಯಗಳ ಹಿತ ಕಾಪಾಡಲು, ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಬಹಿರಂಗವಾಗಿ ಚರ್ಚಿಸದೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಾರದು ಎಂದು ಕುಷ್ಟಗಿ ತಾಲೂಕಿನ ಬಂಜಾರ ಕ್ಷೇಮಾಭಿವೃದ್ಧಿ ಸೇವಾ ಸಂಘ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರ ಸಿಬ್ಬಂದಿಗೆ ಮನವಿ ಪತ್ರವನ್ನು ನೀಡಿದರು.
ಸದಾಶಿವ ಆಯೋಗ ಜಾರಿಗೆ ಮೊದಲು ಬಹಿರಂಗ ಚರ್ಚೆಯಾಗಲಿ: ಬಂಜಾರ ಕ್ಷೇಮಾಭಿವೃದ್ಧಿ ಮನವಿ - ಬಂಜಾರ ಸಮಾಜದ ಅಧ್ಯಕ್ಷ ಸಂಗಪ್ಪ ಲಮಾಣಿ
ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಬಹಿರಂಗವಾಗಿ ಚರ್ಚಿಸದೇ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬಾರದು ಎಂದು ಕುಷ್ಟಗಿ ತಾಲೂಕಿನ ಬಂಜಾರ ಕ್ಷೇಮಾಭಿವೃದ್ಧಿ ಸೇವಾ ಸಂಘ ಒತ್ತಾಯಿಸಿದೆ.

ಬಂಜಾರ ಸಮಾಜದ ಅಧ್ಯಕ್ಷ ಸಂಗಪ್ಪ ಲಮಾಣಿ ನೇತೃತ್ವದ ತಂಡ ಶಾಸಕ ಬಯ್ಯಾಪೂರ ಅವರು ಇಲ್ಲದಿದ್ದ ಹಿನ್ನೆಲೆಯಲ್ಲಿ ಕಾರ್ಯಾಲಯದ ಸಿಬ್ಬಂದಿಗೆ ಮನವಿ ಪತ್ರ ಸಲ್ಲಿಸಿದರು.
ನ್ಯಾಯಮೂರ್ತಿ ಸದಾಶಿವ ಆಯೋಗ ಬಹಿರಂಗ ಚರ್ಚೆ ಇಲ್ಲದೇ ಏಕಪಕ್ಷಕೀಯ ತೀರ್ಮಾನಕ್ಕೆ ಬರಬಾರದು. ಈ ವರದಿಯನ್ನು ಸಾರ್ವಜನಿಕ ಚರ್ಚೆಗೆ ಬಿಡಬೇಕು. ಪರಿಶಿಷ್ಟ ಜಾತಿಯ 101 ಸಮುದಾಯಗಳಿಗೆ, ದೃಢೀಕೃತ ಪ್ರತಿ ನೀಡಿ ಆಕ್ಷೇಪಣೆ, ತಕರಾರು, ನ್ಯಾಯ ಸಮ್ಮತಿ ತಿದ್ದುಪಡಿಗೆ ಕಾಲಾವಕಾಶ ನೀಡಬೇಕು. ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ನ್ಯಾಯಮೂರ್ತಿ ನಾಗಮೋಹನದಾಸ ಶಿಫಾರಸನ್ನು ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಬೇಕು. ರಾಜ್ಯ ಸರ್ಕಾರ ಎಲ್ಲಾ, ಜಾತಿ ಜನಾಂಗಗಳ ಬುಡಕಟ್ಟು ವಾಸ್ತವ ಸಂಗತಿ ಅರಿತು ಹಿಂದಿನ ಸರ್ಕಾರ ತಯಾರಿಸಿರುವ ಸಾಮಾಜಿಕ, ಆರ್ಥಿಕ ಸಮಿಕ್ಷೆಯ ವರದಿಯ ಬಿಡುಗಡೆಗೆ ಒತ್ತಾಯಿಸಿದರು.