ಗಂಗಾವತಿ:ನಗರಸಭೆ ಚುನಾವಣೆ ಎದುರಿಸಲು ನಾವು ಬಾಂಬೆಯಿಂದ ಬಾಡಿಗೆ ಗೂಂಡಾಗಳನ್ನು ಕರೆಯಿಸಿದ್ದೇವೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಆರೋಪ ಮಾಡಿದ್ದು, ಅವರು ತಮ್ಮ ಆರೋಪವನ್ನು ಸಾಬೀತುಪಡಿಸಬೇಕು. ಹಾಗೊಂದು ವೇಳೆ ಅವರು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇಲ್ಲವಾದಲ್ಲಿ ಅವರೇ ನಿವೃತ್ತಿ ಪಡೆಯಬೇಕು. ತಾಕತ್ತಿದ್ದರೆ ಸವಾಲು ಸ್ವೀಕರಿಸಲಿ ಎಂದು ಶಾಸಕ ಪರಣ್ಣ ಮುನವಳ್ಳಿ ಸವಾಲೆಸೆದರು.
ಅನ್ಸಾರಿ ಹೇಳಿಕೆ ಸಾಬೀತುಪಡಿಸಲಿ ಇಲ್ಲವೇ ರಾಜಕೀಯ ನಿವೃತ್ತಿ ಪಡೆಯಲಿ: ಶಾಸಕ ಪರಣ್ಣ ಮುನವಳ್ಳಿ - Gangavati Latest News Update
ಇಕ್ಬಾಲ್ ಅನ್ಸಾರಿಯವರ ಬಾಡಿಗೆ ಬಾಂಬೆ ಗೂಂಡಾ ಹೇಳಿಕೆಯನ್ನು ಶಾಸಕ ಪರಣ್ಣ ಮುನವಳ್ಳಿ ತೀವ್ರವಾಗಿ ಖಂಡಿಸಿದ್ದಾರೆ. ಅವರು ತಮ್ಮ ಆರೋಪವನ್ನು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇಲ್ಲವಾದಲ್ಲಿ ಅವರೇ ನಿವೃತ್ತಿ ಪಡೆಯಬೇಕು. ತಾಕತ್ತಿದ್ದರೆ ಸವಾಲು ಸ್ವೀಕರಿಸಲಿ ಎಂದು ನೇರ ಸವಾಲು ಹಾಕಿ ಮಾಜಿ ಸಚಿವರಿಗೆ ಪಂಥ್ವಾಹನ ನೀಡಿದರು.
ಅನ್ಸಾರಿಯವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿಯ ಹಾಲಿ ಶಾಸಕ ಪರಣ್ಣ ಮುನವಳ್ಳಿ, ನೇರ ಸವಾಲು ಹಾಕಿ ಮಾಜಿ ಸಚಿವರಿಗೆ ಪಂಥ್ವಾಹನ ನೀಡಿದರು. ರಾಜಕೀಯವಾಗಿ ನನಗೆ ಬಾಂಬೆಯ ಯಾವೊಬ್ಬ ವ್ಯಕ್ತಿ ಗೊತ್ತಿಲ್ಲ. ಕೇವಲ ವ್ಯವಹಾರಿಕವಾಗಿ ಮಾತ್ರ ಗೊತ್ತು. ಬಹುಶಃ ಬಾಂಬೆಯ ಎಲ್ಲಾ ಚಟುವಟಿಕೆಗಳು ಅವರಿಗೆ ಗೊತ್ತಿರಬೇಕು. ಅದಕ್ಕೆ ಬಾಂಬೆ ಉದಾಹರಿಸಿದ್ದಾರೆ ಎಂದು ಹೇಳಿದರು.
ಗಡಿಪಾರಾದವರನ್ನು ಬಿಜೆಪಿಗರು ಬೆಳೆಸುತ್ತಿದ್ದಾರೆ ಎಂಬ ಮಾಜಿ ಸಚಿವ ಅನ್ಸಾರಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಗಡಿಪಾರಾದವರು, ನಕ್ಸಲೈಟ್ ಪ್ರಕರಣದಲ್ಲಿದ್ದವರನ್ನು ಇವರು ಬೆಳೆಸುತ್ತಿಲ್ಲವೇ ಎಂದು ಪರೋಕ್ಷವಾಗಿ ಸೈಯದ್ ಅಲಿಗೆ ಟಾಂಗ್ ನೀಡಿದರು.