ಕರ್ನಾಟಕ

karnataka

ETV Bharat / state

ಗಂಗಾವತಿ ಸಮೀಪದ ಬೆಟ್ಟದಲ್ಲಿ ಜೋಡಿ ಚಿರತೆ ಪ್ರತ್ಯಕ್ಷ - ಗಂಗಾವತಿ ಸಮೀಪದ ಬೆಟ್ಟದಲ್ಲಿ ಜೋಡಿ ಚಿರತೆ ಪ್ರತ್ಯಕ್ಷ

ಒಂದು ಚಿರತೆ ಬೆಟ್ಟದ ಕಲ್ಲಿನ‌ ತುದಿಯೊಂದರ ಮೇಲೆ ನಿಂತಿದ್ದು, ಮತ್ತೊಂದು ಅದೇ ಬೆಟ್ಟದ ಕಲ್ಲಿನ ಕೆಳಗೆ ಇಳಿದು ಅತ್ತಿಂದಿತ್ತ ಓಡಾಡುವ ದೃಶ್ಯ ಹಾಗೂ ಎರಡು ಚಿರತೆಗಳು ಚಿನ್ನಾಟ ಆಡುವ ದೃಶ್ಯ ಕಂಡು ಬಂದಿವೆ.

leopards-spotted-in-hill-near-gangavati
ಗಂಗಾವತಿ ಸಮೀಪದ ಬೆಟ್ಟದಲ್ಲಿ ಜೋಡಿ ಚಿರತೆ ಪ್ರತ್ಯಕ್ಷ

By

Published : Oct 5, 2022, 3:47 PM IST

ಗಂಗಾವತಿ: ತಾಲ್ಲೂಕಿನ ಬಸವನದುರ್ಗಾ ಕಡೆಬಾಗಿಲು ಗ್ರಾಮಗಳ ಮಧ್ಯ ಇರುವ ಕುದುರೆಮುಖ ಹುಲಿಗೆಮ್ಮ ದೇವಸ್ಥಾನದ ಸಮೀಪದ ಬೆಟ್ಟದಲ್ಲಿ ಬುಧವಾರ ಜೋಡಿ ಚಿರತೆ ಪ್ರತ್ಯಕ್ಷವಾಗಿದೆ.

ಗಂಗಾವತಿಯಿಂದ ಆನೆಗೊಂದಿಗೆ ಹೋಗುವ ಮಾರ್ಗ ಮಧ್ಯೆ ಬರುವ ಬೆಟ್ಟದ ಸ್ಥಳದಲ್ಲಿ ಬೆಳಗ್ಗೆ ಜೋಡಿ ಚಿರತೆ ಕಂಡು ಬಂದಿವೆ. ಒಂದು ಬೆಟ್ಟದ ಕಲ್ಲಿನ‌ ತುದಿಯೊಂದರ ಮೇಲೆ ನಿಂತಿದ್ದು, ಮತ್ತೊಂದು ಅದೇ ಬೆಟ್ಟದ ಕಲ್ಲಿನ ಕೆಳಗೆ ಇಳಿದು ಅತ್ತಿಂದಿತ್ತ ಓಡಾಡುವ ದೃಶ್ಯ ಹಾಗೂ ಎರಡು ಚಿರತೆಗಳು ಚಿನ್ನಾಟ ಆಡುವ ದೃಶ್ಯ ಕಂಡು ಬಂದಿವೆ.

ಗಂಗಾವತಿ ಸಮೀಪದ ಬೆಟ್ಟದಲ್ಲಿ ಜೋಡಿ ಚಿರತೆ ಪ್ರತ್ಯಕ್ಷ

ಸುಮಾರು ಐದು ನಿಮಿಷಕ್ಕೂ ಹೆಚ್ಚು ಕಾಲ ಕಾಣಿಸಿರುವ ಜೋಡಿ ಚಿರತೆಗಳ ದೃಶ್ಯವನ್ನು ದಾರಿಹೋಕರೊಬ್ಬರು ಚಿತ್ರಿಸಿದ್ದಾರೆ. ಇದರಿಂದ ಗಂಗಾವತಿ-ಹುಲಿಗಿ ಮಧ್ಯ ಸಂಚರಿಸುವ ದ್ವಿಚಕ್ರ ವಾಹನ ಸವಾರರಲ್ಲಿ ಆತಂಕ ಮನೆ ಮಾಡಿದೆ.

ಇದನ್ನೂ ಓದಿ:ಬಳ್ಳಾರಿ: ಐತಿಹಾಸಿಕ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ..

ABOUT THE AUTHOR

...view details