ಕರ್ನಾಟಕ

karnataka

ETV Bharat / state

ಕರಡಿಗುಡ್ಡ ಗ್ರಾಮದ ಬೆಟ್ಟದ ಬಳಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ - Koppal Anxiety among villagers News

ರಸ್ತೆ ಪಕ್ಕದಲ್ಲಿರುವ ಈ ಗುಡ್ಡದಲ್ಲಿ ಚಿರತೆ ಓಡಾಡುತ್ತಿರುವುದನ್ನು ಸ್ಥಳೀಯರು ದೂರದಿಂದಲೇ ತಮ್ಮ ಮೊಬೈಲ್​​​ನಲ್ಲಿ ಸೆರೆ ಹಿಡಿದಿದ್ದಾರೆ.

ಚಿರತೆ ಪ್ರತ್ಯಕ್ಷ
ಚಿರತೆ ಪ್ರತ್ಯಕ್ಷ

By

Published : Aug 19, 2020, 8:56 AM IST

ಕೊಪ್ಪಳ:ಜಿಲ್ಲೆಯ ಕನಕಗಿರಿ ತಾಲೂಕಿನ ಕರಡಿಗುಡ್ಡ ಗ್ರಾಮದ ಹೊರವಲಯದ ಬೆಟ್ಟವೊಂದರ ಬಳಿ ಚಿರತೆಯೊಂದು ಪ್ರತ್ಯಕ್ಷವಾಗಿ ಆತಂಕ ಮೂಡಿಸಿದೆ.

ಕರಡಿಗುಡ್ಡ ಗ್ರಾಮದ ಬೆಟ್ಟದ ಬಳಿ ಚಿರತೆ ಪ್ರತ್ಯಕ್ಷ

ರಸ್ತೆ ಪಕ್ಕದಲ್ಲಿರುವ ಈ ಗುಡ್ಡದಲ್ಲಿ ಚಿರತೆ ಓಡಾಡುತ್ತಿರುವುದನ್ನು ಸ್ಥಳೀಯರು ದೂರದಿಂದಲೇ ತಮ್ಮ ಮೊಬೈಲ್​​​ನಲ್ಲಿ ಸೆರೆ ಹಿಡಿದಿದ್ದಾರೆ. ನಿನ್ನೆ ಸಂಜೆ ವೇಳೆ ಚಿರತೆಯೊಂದು ತಮ್ಮೂರ ಗುಡ್ಡದಲ್ಲಿ ಪ್ರತ್ಯಕ್ಷವಾಗಿರೋದು ಕರಡಿಗುಡ್ಡ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ.

ಗ್ರಾಮದ ಅನೇಕರು ಈ ಗುಡ್ಡದ ಮಾರ್ಗದಿಂದಲೇ ತಮ್ಮ ಹೊಲಗಳಿಗೆ ಹೋಗಬೇಕು. ಈಗ ಚಿರತೆ ಪ್ರತ್ಯಕ್ಷವಾಗಿರುವುದು ಹೊಲಗಳಿಗೆ ಹೋಗಲು ಹಾಗೂ ಈ ಭಾಗದಲ್ಲಿ ಜನ ಓಡಾಡುವುದಕ್ಕೆ ಭಯ ಮೂಡಿಸಿದೆ. ಹೀಗಾಗಿ ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ABOUT THE AUTHOR

...view details