ಗಂಗಾವತಿ:ಕಳೆದ ಒಂದು ತಿಂಗಳಿಂದ ತಾಲೂಕಿನ ಜನರಿಗೆ ದುಃಸ್ವಪ್ನದಂತೆ ಕಾಡುತ್ತಿರುವ ಚಿರತೆಗಳ ಹಾವಳಿ ಇದೀಗ ಗಂಗಾವತಿಗೂ ಕಾಲಿಟ್ಟಿದೆ. ಇದರಿಂದ ಸ್ಥಳೀಯರು ಆತಂಕದಲ್ಲಿ ಓಡಾಡುತ್ತಿದ್ದಾರೆ.
ಸುಮಾರು ಐದಾರು ಅಡಿ ಉದ್ದ ಹಾಗೂ ಮೂರೂವರೆ ಅಡಿ ಎತ್ತರ ಇರುವ ಚಿರತೆಯೊಂದು ಗಂಗಾವತಿಯ ಬೆಟ್ಟದಲ್ಲಿ ಕಾಣಿಸಿದ್ದು, ಈ ದೃಶ್ಯವನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಬೆಟ್ಟದ ಕಲ್ಲಿನ ತುದಿಯಿಂದ ನಡೆದುಕೊಂಡು ಹೋಗುವ ದೃಶ್ಯವನ್ನು ವ್ಯಕ್ತಿಯೊಬ್ಬರು ಕಳ್ಳಿಗಿಡದ ಹಿಂದೆ ಅಡಗಿ ಕುಳಿತುಕೊಂಡು ಸೆರೆ ಹಿಡಿದಿದ್ದಾರೆ.