ಗಂಗಾವತಿ:ಇಲ್ಲಿನ ಜಯನಗರದ ಸಿದ್ದಿಕೇರಿ ರಸ್ತೆಯಲ್ಲಿರುವ ಜನವಸತಿ ಪ್ರದೇಶದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆಯೊಂದು ಬಿದ್ದಿರುವ ಘಟನೆ ತಡರಾತ್ರಿ ನಡೆದಿದೆ. ಸುಮಾರು ನಾಲ್ಕರಿಂದ ಐದು ವರ್ಷದ ಗಂಡು ಚಿರತೆ ಸೆರೆಯಾಗಿದೆ. ಬೇಟೆ ಅರಸಿಕೊಂಡು ವಸತಿ ಪ್ರದೇಶಕ್ಕೆ ಬಂದಿರುವ ಸಾಧ್ಯತೆ ಇದೆ. ಸೆರೆಯಾದ ಚಿರತೆ ಸಂಪೂರ್ಣ ಆರೋಗ್ಯವಾಗಿದ್ದು, ಈಗಾಗಲೇ ಸುರಕ್ಷಿತ ಪ್ರದೇಶದಲ್ಲಿ ಬಿಟ್ಟು ಬರಲಾಗಿದೆ ಎಂದು ಆರ್ಎಫ್ಓ ಶಿವರಾಜ ಮೇಟಿ ತಿಳಿಸಿದ್ದಾರೆ.
ಬೋನಿಗೆ ಬಿದ್ದ ಚಿರತೆ: ಜೋಡಿ ಚಿರತೆ ಪೈಕಿ ಗಂಡು ಚಿರತೆ ಸೆರೆ - ಚಿರತೆ ಸೆರೆ
ಜಯನಗರದ ಸಿದ್ದಿಕೇರಿ ರಸ್ತೆಯಲ್ಲಿರುವ ಜನವಸತಿ ಪ್ರದೇಶದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ.
ಚಿರತೆ ಸೆರೆ
ಕಳೆದ ಎರಡು ದಿನದ ಹಿಂದೆ ಇಲ್ಲಿನ ಜಯನಗರದ ಜನವಸತಿ ಪ್ರದೇಶದ ಸಮೀಪ ಜೋಡಿ ಚಿರತೆ ಕಂಡು ಬಂದಿದ್ದವು. ಹೀಗಾಗಿ ಅರಣ್ಯ ಇಲಾಖೆ ಚಿರತೆ ಸೆರೆಗೆ ಬೋನು ಇಟ್ಟಿತ್ತು. ಆದರೆ ಸೆರೆಯಾದ ಚಿರತೆ, ಜೋಡಿ ಚಿರತೆಯಲ್ಲಿರುವುದರ ಪೈಕಿಯೇ ಅಥವಾ ಬೇರೆಯದ್ದೆ? ಎಂಬ ಸಂದೇಹ ವ್ಯಕ್ತವಾಗಿದೆ.
ಇದನ್ನೂ ಓದಿ:ಬೆಳಗಾವಿ ಚಿರತೆ ಸೆರೆ ಕಾರ್ಯಾಚರಣೆ.. ಶಿವಮೊಗ್ಗದ ಸಕ್ರೆಬೈಲು ಬಿಡಾರದಿಂದ 2 ಆನೆಗಳ ಆಗಮನ