ಕರ್ನಾಟಕ

karnataka

ETV Bharat / state

ಅಡುಗೆ ಭಟ್ಟನ ಹೊತ್ತೊಯ್ದು ತಿಂದಾಕಿದ ಚಿರತೆ: ಬೆಚ್ಚಿಬಿದ್ದ ಆನೆಗೊಂದಿ ಜನತೆ! - ಕೊಪ್ಪಳ ಚಿರತೆ ದಾಳಿ ನ್ಯೂಸ್

ಕೊಪ್ಪಳ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ಬುಧವಾರ ರಾತ್ರಿ ನಡೆದಿದೆ. ಮೇಗೋಟೆಯಲ್ಲಿರುವ ದುರ್ಗಾ ಬೆಟ್ಟದ ದೇವಸ್ಥಾನದ ಅಡುಗೆ ಭಟ್ಟ ಹುಲುಗೇಶ ಈರಪ್ಪ ಮಡ್ಡೇರ(23) ಮೇಲೆ‌ ಚಿರತೆಯೊಂದು ಹೊತ್ತೊಯ್ದು ತಿಂದಾಕಿದೆ.

Leopard attack on a man: chef died
ಹುಲುಗೇಶ ಈರಪ್ಪ ಮಡ್ಡೇರ ಸಾವು

By

Published : Nov 5, 2020, 6:38 AM IST

Updated : Nov 5, 2020, 8:13 AM IST

ಗಂಗಾವತಿ: ದೇಗುಲದ ಅಡುಗೆ ಭಟ್ಟನೋರ್ವನ ಮೇಲೆ‌ ಚಿರತೆಯೊಂದು ದಾಳಿ ಮಾಡಿರುವ ಘಟನೆ ತಾಲೂಕಿನ‌ ಆನೆಗೊಂದಿಯಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಆನೆಗೊಂದಿ ಗ್ರಾಮದ ನಿವಾಸಿ, ಮೇಗೋಟೆಯಲ್ಲಿರುವ ದುರ್ಗಾ ಬೆಟ್ಟದ ದೇಗುಲದ‌ ಅಡುಗೆ ಭಟ್ಟ ಹುಲುಗೇಶ ಈರಪ್ಪ ಮಡ್ಡೇರ (23) ಎಂದು ಗುರುತಿಸಲಾಗಿದೆ. ಹುಲುಗೇಶ ದೇವಸ್ಥಾನದ ಬಳಿ ಕೆಲಸ‌ ಮಾಡುತ್ತಿರುವ ಸಂದರ್ಭದಲ್ಲಿ ಬುಧವಾರ ರಾತ್ರಿ ಬೆಟ್ಟದಿಂದ ಬಂದ ಚಿರತೆ ದಾಳಿ ನಡೆಸಿದೆ. ಬಳಿಕ ಹುಲುಗೇಶನನ್ನು ಎಳೆದೊಯ್ದು ತಿಂದು ಹಾಕಿದೆ.

ದೇಹದಿಂದ ತಲೆಭಾಗ ಕಿತ್ತು ಬಂದಿದ್ದು, ವ್ಯಕ್ತಿಯ ಮೃತದೇಹದ ಅವಶೇಷಗಳು ಪತ್ತೆಯಾಗಿವೆ. ಸದ್ಯ ಸ್ಥಳಕ್ಕೆ ಅರಣ್ಯ, ಪೊಲೀಸ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.

ಇದೇ ಬೆಟ್ಟದಲ್ಲಿ ಕಳೆದ ಕೆಲ ದಿನಗಳ ಹಿಂದೆ 13 ವರ್ಷದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿತ್ತು. ಅಲ್ಲದೇ ಚಿಕ್ಕರಾಂಪೂರದ‌ ಬಳಿ ಮಹಿಳೆವೋರ್ವಳ ಮೇಲೂ ಚಿರತೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿತ್ತು.

ಈ ಪ್ರಕರಣ‌ ಮಾಸುವ ಮುನ್ನವೇ ಇದೀಗ ಅಡುಗೆ ಭಟ್ಟನನ್ನು ಬಲಿ ಪಡೆದಿರುವುದು ಈ ಭಾಗದ ಜನರನ್ನು ಬೆಚ್ಚಿಬೀಳಿಸಿದೆ.

Last Updated : Nov 5, 2020, 8:13 AM IST

ABOUT THE AUTHOR

...view details