ಕರ್ನಾಟಕ

karnataka

ETV Bharat / state

ಜಿಲ್ಲಾಧಿಕಾರಿ ಭೇಟಿ ಮಾಡಿ ತೆರಳಿದ್ದ ಬೆನ್ನಲ್ಲೆ ಮತ್ತೆ ಪ್ರತ್ಯಕ್ಷವಾದ ಚಿರತೆ - ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್

ಚಿರತೆ ಹಾವಳಿಯಿಂದ ಭೀತಿಗೊಳಗಾಗಿದ್ದ ಆನೆಗೊಂದಿ ದುರ್ಗಬೆಟ್ಟಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಅಲ್ಲಿನ ನಿವಾಸಿಗಳಿಗೆ ಧೈರ್ಯ ತುಂಬಿ ಹೋಗಿದ್ದ ಎರಡು ದಿನಗಳ ನಂತರ ಚಿರತೆ ಕಾಣಿಸಿಕೊಳ್ಳುವ ಮೂಲಕ ಮತ್ತಷ್ಟು ಆತಂಕ ಸೃಷ್ಟಿಸಿದೆ.

Leopord
ಚಿರತೆ

By

Published : Nov 19, 2020, 7:41 PM IST

ಗಂಗಾವತಿ:ಬೆಂಬಿಡದೇ ಕಾಡುತ್ತಿರುವ ಚಿರತೆ ಹಾವಳಿಯಿಂದ ನಲಗುತ್ತಿರುವ ತಾಲೂಕಿನ ಆನೆಗೊಂದಿ ದುರ್ಗಬೆಟ್ಟದಲ್ಲಿ ಗುರುವಾರ ಬೆಟ್ಟದ ಕಲ್ಲಿನ ಮೇಲೆ ಚಿರತೆ ಪ್ರತ್ಯಕ್ಷವಾಗುವ ಮೂಲಕ ಜನರಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ.

ಚಿರತೆ ಹಾವಳಿಯಿಂದ ಇಲ್ಲಿನ ನಿವಾಸಿಗಳು ನಲಗುತ್ತಿದ್ದು, ಜನರಲ್ಲಿ ಧೈರ್ಯ ತುಂಬುವ ಉದ್ದೇಶಕ್ಕೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್, ಮಂಗಳವಾರವಷ್ಟೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಹಾಗೆಯೇ ಕೂಡಲೇ ಹೆಚ್ಚುವರಿ ಕ್ರಮ ಕೈಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಮೊಬೈಲ್​​​ನಲ್ಲಿ ಸೆರೆಯಾಗಿರುವ ಬೆಟ್ಟದ ಮೇಲೆ ಕುಳಿತಿರುವ ಚಿರತೆ

ಅದರ ಬೆನ್ನಲ್ಲೆ ಗುರುವಾರ ಚಿರತೆ ಮತ್ತೆ ಪ್ರತ್ಯಕ್ಷವಾಗುವ ಮೂಲಕ ಆತಂಕ ಸೃಷ್ಟಿಸಿದೆ. ಬೆಟ್ಟದ ಬಂಡೆಯ ಮೇಲೆ ಸುಮಾರು ಐದಾರು ನಿಮಿಷ ವಿಶ್ರಾಂತಿ ಭಂಗಿಯಲ್ಲಿದ್ದ ಚಿರತೆಯ ದೃಶ್ಯವನ್ನು ಸ್ಥಳೀಯ ಯುವಕರು ಮೊಬೈಲ್​​​​ನಲ್ಲಿ ಸೆರೆ ಹಿಡಿದಿದ್ದಾರೆ. ಭೀತಿಗೊಳಗಾದ ಕೋತಿಗಳು ಅರಚುವಿಕೆಯಿಂದಾಗಿ ಚಿರತೆ ಇರುವುದು ಯುವಕರ ಗಮನಕ್ಕೆ ಬಂದಿದೆ.

ABOUT THE AUTHOR

...view details