ಕೊಪ್ಪಳ:ಗಂಗಾವತಿ ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ಕೊಟ್ಟ ಗಂಗಾವತಿಯ ಶಾಸಕ ಪರಣ್ಣ ಮುನವಳ್ಳಿ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು, ನೂರಾರು ಕೋತಿಗಳಿಗೆ ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಅಂಜನಾದ್ರಿ ಬೆಟ್ಟದ ಕೋತಿಗಳಿಗೆ ಆಹಾರ ನೀಡಿದ ಶಾಸಕ! - ಅಂಜನಾದ್ರಿ ಬೆಟ್ಟ
ಅಂಜನಾದ್ರಿ ಬೆಟ್ಟಕ್ಕೆ ಭೇಟಿ ಕೊಟ್ಟ ಗಂಗಾವತಿಯ ಶಾಸಕ ಪರಣ್ಣ ಮುನವಳ್ಳಿ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು, ನೂರಾರು ಕೋತಿಗಳಿಗೆ ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
![ಅಂಜನಾದ್ರಿ ಬೆಟ್ಟದ ಕೋತಿಗಳಿಗೆ ಆಹಾರ ನೀಡಿದ ಶಾಸಕ! Legislator Paranna Munavalli fed Anjanadri hill monkeys ...!](https://etvbharatimages.akamaized.net/etvbharat/prod-images/768-512-6757333-929-6757333-1586628383344.jpg)
ಅಂಜನಾದ್ರಿ ಬೆಟ್ಟದ ಕೋತಿಗಳಿಗೆ ಆಹಾರ ನೀಡಿದ ಶಾಸಕ...!
ಹಣ್ಣು-ಹಂಪಲಗಳೊಂದಿಗೆ ತೆರಳಿದ್ದ ಶಾಸಕ ಮುನವಳ್ಳಿ, ಕೋತಿಗಳಿಗೆ ಆಹಾರ ನೀಡಿದರು. ಆರಂಭದಲ್ಲಿ ಒಂದೆರಡು ಕೋತಿಗಳು ಆಹಾರಕ್ಕಾಗಿ ಆಗಮಿಸಿದವು. ಆ ನಂತರ ಕೋತಿಗಳು ಹಿಂಡು ಹಿಂಡಾಗಿ ಬಂದು ಆಹಾರ ಸೇವಿಸಿದವು.
ಕಳೆದ ಎರಡು ವಾರದಿಂದ ಲಾಕ್ಡೌನ್ ಆದ ಪರಿಣಾಮ ದೇಗುಲಕ್ಕೆ ಬರುತ್ತಿದ್ದ ಭಕ್ತರ ಸಂಖ್ಯೆ ಸ್ಥಗಿತವಾಗಿದೆ. ಹೀಗಾಗಿ ಭಕ್ತರು ನೀಡುತ್ತಿದ್ದ ಆಹಾರದ ಮೇಲೆ ಅವಲಂಬಿತವಾಗಿದ್ದ ವಾನರ ಸೇನೆ ಇದೀಗ ಆಹಾರವಿಲ್ಲದೇ ಕಂಗಾಲಾಗಿದೆ.