ಕೊಪ್ಪಳ: ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಅವರ ನಿವಾಸಕ್ಕೆ ಡಿಸಿಎಂ ಲಕ್ಷ್ಮಣ ಸವದಿ ಅವರು ದಿಢೀರ್ ಭೇಟಿ ನೀಡಿ ಹೋಗಿರುವುದು ಕುತೂಹಲ ಮೂಡಿಸಿದೆ.
ಕುತೂಹಲ ಮೂಡಿಸಿದ ಶಾಸಕ ಹಾಲಪ್ಪ ಆಚಾರ್, ಸವದಿ ಭೇಟಿ - MLA Halappa Achar
ಸಚಿವ ಸಂಪುಟ ವಿಸ್ತರಣೆ ಚಟುವಟಿಕೆಗಳು ಗರಿಗೆದರಿಕೊಂಡಿರುವ ಬೆನ್ನಲ್ಲೇ ಶಾಸಕ ಹಾಲಪ್ಪ ಆಚಾರ್ ಅವರ ನಿವಾಸಕ್ಕೆ ಡಿಸಿಎಂ ಲಕ್ಷ್ಮಣ ಸವದಿ ಅವರು ಭೇಟಿ ನೀಡಿ, ಮಾತುಕತೆ ನಡೆಸಿ ಹೋಗಿದ್ದಾರೆ.

ಶಾಸಕ ಹಾಲಪ್ಪ ಆಚಾರ್ ಮತ್ತು ಸವದಿ
ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಚಟುವಟಿಕೆಗಳು ಗರಿಗೆದರಿಕೊಂಡಿವೆ. ಈ ವೇಳೆ, ಡಿಸಿಎಂ ಲಕ್ಷ್ಮಣ ಸವದಿ ಅವರು ಶಾಸಕ ಹಾಲಪ್ಪ ಆಚಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಹೋಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಈ ಹಿಂದೆ ಹಾಲಪ್ಪ ಆಚಾರ್ ಅವರಿಗೆ ಸಚಿವ ಸ್ಥಾನ ದೊರೆಯುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಅವರಿಗೆ ಅವಕಾಶ ತಪ್ಪಿ ಹೋಗಿದ್ದು, ಈ ಬಾರಿಯಾದರೂ ಸಚಿವ ಸ್ಥಾನ ದೊರೆಯುತ್ತದೆಯಾ ಎನ್ನುವುದನ್ನು ಕಾದು ನೋಡಬೇಕಿದೆ.