ಕರ್ನಾಟಕ

karnataka

ETV Bharat / state

ಭೂ ಒಡೆತನ ಯೋಜನೆಯಡಿ ಬಡವರಿಗೆ 4 ಸಾವಿರ ಎಕರೆ ಜಮೀನು ಹಂಚಿಕೆ; ಕಾರಜೋಳ - ಡಿಸಿಎಂ ಗೋವಿಂದ್​ ಕಾರಜೋಳ ಸುದ್ದಿ,

ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಭೂ ಒಡೆತನ ಯೋಜನೆಯಲ್ಲಿ ಬಡವರಿಗೆ 500 ಎಕರೆ ಜಮೀನು ಖರೀಧಿಸಲು ಸಾಧ್ಯವಾಗಲಿಲ್ಲ ಎಂದು ಡಿಸಿಎಂ ಗೋವಿಂದ್​ ಕಾರಜೋಳ ಹೇಳಿದ್ದಾರೆ.

Land Ownership Plan, Land Ownership Plan news, DCM Govind Karjol Spark on Congress, DCM Govind Karjol, DCM Govind Karjol news, ಭೂ ಒಡೆತನ ಯೋಜನೆ, ಭೂ ಒಡೆತನ ಯೋಜನೆ ಸುದ್ದಿ, ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ ಡಿಸಿಎಂ ಗೋವಿಂದ್​ ಕಾರಜೋಳ, ಡಿಸಿಎಂ ಗೋವಿಂದ್​ ಕಾರಜೋಳ, ಡಿಸಿಎಂ ಗೋವಿಂದ್​ ಕಾರಜೋಳ ಸುದ್ದಿ,
ಕಾಂಗ್ರೆಸ್​ ವಿರುದ್ಧ ಡಿಸಿಎಂ ಕಾರಜೋಳ ವಾಗ್ದಾಳಿ

By

Published : Aug 17, 2020, 7:32 PM IST

ಕುಷ್ಟಗಿ (ಕೊಪ್ಪಳ):ಭೂ ಒಡೆತನ ಯೋಜನೆಯಲ್ಲಿ ಬಡವರಿಗೆ ಹಂಚಲು ಹಿಂದಿನ ಕಾಂಗ್ರೆಸ್ ಸರ್ಕಾರ ಪ್ರತಿವರ್ಷ 500 ಎಕರೆ ಭೂಮಿ ಖರೀದಿಸಲು ವಿಫಲವಾಗಿತ್ತು ಎಂದು ಉಪ ಮುಖ್ಯಮಂತ್ರಿ ಗೋವಿಂದ್ ಕಾರಜೋಳ ಛೇಡಿಸಿದರು.

ಕಾಂಗ್ರೆಸ್​ ವಿರುದ್ಧ ಡಿಸಿಎಂ ಕಾರಜೋಳ ವಾಗ್ದಾಳಿ

ಸೋಮವಾರ ತಾಲೂಕಿನ ಕಡೇಕೊಪ್ಪ ಕ್ರಾಸ್​ನಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃಧ್ಧಿ ಇಲಾಖೆಯ ಅಂದಾಜು 500 ಕೋಟಿ ರೂ. ಯೋಜನಾ ವೆಚ್ಚದಲ್ಲಿ ಕೃಷ್ಣಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಈ ಅವಧಿಯಲ್ಲಿ 370 ಕೋಟಿ ರೂ. ಖರ್ಚು ಮಾಡಿ 4,014 ಎಕರೆ ಜಮೀನು ಖರೀದಿಸಿಕೊಟ್ಟಿದೆ. ಈ ವರ್ಷದ ಸಂಕಷ್ಟದ ಪರಿಸ್ಥಿತಿಯಲ್ಲೂ 11,140 ಕೊಳವೆಬಾವಿ ಕೊರೆಯಿಸಿಕೊಟ್ಟಿದೆ ಎಂದರು.

4 ತಿಂಗಳ ಲಾಕಡೌನ್ ಸಂದರ್ಭದಲ್ಲಿ 11,142 ಕೊಳವೆಬಾವಿ ಕೊರೆಯಿಸಿದ್ದು, ಇನ್ನೂ 10 ಸಾವಿರ ಕೊಳವೆಬಾವಿ ಕೊರೆಸಲು ಸಿದ್ದರಿದ್ದೇವೆ ಎಂದರು.

ಗಂಗಾ ಕಲ್ಯಾಣ ಯೋಜನೆಯಲ್ಲಿ ಬಡವರಿಗೆ ಸಾಕಷ್ಟು ಅನುಕೂಲವಾಗಲಿದ್ದು, ಕುಟುಂಬಕ್ಕೆ ಉದ್ಯೋಗವಾಗುವ ಜೊತೆಗೆ ಭೂಮಿ ಬೆಲೆ ಹೆಚ್ಚಾಗುತ್ತಿದೆ. ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲೂ 10,347 ಕೊಳವೆಬಾವಿಗಳನ್ನು ವಿದ್ಯುತೀಕರಣಗೊಳಿಸಲಾಗಿದೆ ಎಂದರು.

ABOUT THE AUTHOR

...view details