ಕರ್ನಾಟಕ

karnataka

ETV Bharat / state

'ಕೊರೊನಾ ಬಂದೈತೆ ಜೋಪಾನ..' ಗೀತೆಯ ಮೂಲಕ ಗ್ರಂಥಪಾಲಕರಿಂದ ಜನಜಾಗೃತಿ - laibrerian song composed on corona

ಈ ವ್ಯಕ್ತಿ ವೃತ್ತಿಯಲ್ಲಿ ಸರ್ಕಾರಿ ಇಲಾಖೆಯ ನೌಕರ, ಗ್ರಂಥಪಾಲಕ. ಆದರೆ ಪ್ರವೃತ್ತಿಯಲ್ಲಿ ಮಾತ್ರ ಗಾಯಕ, ಸಾಹಿತಿ, ಸಂಗೀತ ಸಂಯೋಜಕ, ಕವಿ.. ಹೀಗೆ ಹತ್ತಾರು ಕ್ಷೇತ್ರದಲ್ಲಿ ಸೈ ಎನಿಸಿಕೊಂಡಿದ್ದಾರೆ.

ಗ್ರಂಥಪಾಲಕ
ಗ್ರಂಥಪಾಲಕ

By

Published : Mar 19, 2020, 8:41 AM IST

ಗಂಗಾವತಿ: ವಿಶ್ವವನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ಕೊರೊನಾ ವೈರಸ್ ಬಗ್ಗೆ, ಅದು ಉಂಟು ಮಾಡುತ್ತಿರುವ ತಲ್ಲಣ, ವ್ಯಾಪಿಸುತ್ತಿರುವ ಜಗದ ವಿಸ್ತಾರ, ಅದರ ಬಗೆಗಿನ ಭೀತಿ ಹೀಗೆ ಹತ್ತಾರು ವಿಷಯಗಳ ಮೇಲೆ ಗ್ರಂಥಪಾಲಕ ರಮೇಶ ಗಬ್ಬೂರು ಎಂಬವರು ಗೀತೆ ರಚಿಸಿ ಸ್ವತಃ ರಾಗ, ಸಂಗೀತ ಸಂಯೋಜನೆ ಮಾಡಿದ್ದಾರೆ. ಇದೀಗ ಇವರ ಗೀತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇಲ್ಲಿನ ಬಾಲಕರ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿರುವ ರಮೇಶ ಗಬ್ಬೂರು, ದಲಿತ ಸಂವೇದನೆಯ ವಿಶಿಷ್ಟ ಸಾಹಿತಿ. ವಿಭಿನ್ನ ಗಾಯಕ, ಕವಿ, ರಾಗ-ಸಂಗೀತ ಸಂಯೋಜಕ. ಗೀತೆಗಳಿಗೆ ಭಾವಾರ್ಥ ಕಲ್ಪಿಸುವ ಮೂಲಕ ಜನಮನ ಸೆಳೆದಿದ್ದಾರೆ.

ಕೊರೊನಾ ವೈರಸ್ ವೈರಸ್​​ ಕುರಿತಾದ ಜಾಗೃತಿ ಗೀತೆ

ಕ್ರಾಂತಿ ಗೀತೆ, ಸಾಮಾಜಿಕ ಕಳಕಳಿ, ಸಮಾನತೆಯಂತಹ ವಿಷಯಗಳ ನೂರಾರು ಗೀತೆಗಳಿಗೆ ಗಬ್ಬೂರು ಧ್ವನಿಯಾಗಿದ್ದಾರೆ.

ABOUT THE AUTHOR

...view details