ಗಂಗಾವತಿ:ಇಲ್ಲಿನ ಎಪಿಎಂಸಿಯ ಆವರಣದಲ್ಲಿನ ಚನ್ನಬಸವ ಸ್ವಾಮಿ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರದಿಂದ ಆರಂಭವಾದ ದಸರಾ ಕ್ರೀಡಾಕೂಟವನ್ನು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೇವಲ ಕಾಟಾಚಾರಕ್ಕೆ ಆಯೋಜಿಸಿದೆ ಎಂಬ ಆರೋಪ ಕೇಳಿಬಂದಿದೆ.
ಪ್ರಚಾರದ ಕೊರತೆ: ಕಾಟಾಚರಕ್ಕೆ ದಸರಾ ಕ್ರೀಡಾಕೂಟ ಆಯೋಜನೆ ಆರೋಪ - ದಸರಾ ಕ್ರೀಡಾಕೂಟ
ಗಂಗಾವತಿ ಎಪಿಎಂಸಿಯ ಆವರಣದಲ್ಲಿನ ಚನ್ನಬಸವ ಸ್ವಾಮಿ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರದಿಂದ ಆರಂಭವಾದ ದಸರಾ ಕ್ರೀಡಾಕೂಟವನ್ನು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೇವಲ ಕಾಟಾಚಾರಕ್ಕೆ ಆಯೋಜಿಸಿದೆ ಎಂಬ ಆರೋಪ ಕೇಳಿಬಂದಿದೆ.
ವಾಸ್ತವವಾಗಿ ದಸರಾ ಕ್ರೀಡಾಕೂಟವನ್ನು ಸಾರ್ವಜನಿಕರಿಗಾಗಿ ಹಾಗೂ ವಿವಿಧ ಸಂಘ-ಸಂಸ್ಥೆಗಳು, ಸಂಘಟನೆಗಳ ಯುವ ಕ್ರೀಡಾಪಟುಗಳಿಗೆ ಆಯೋಜಿಸಬೇಕು. ವಯೋಮಿತಿ ಆಧಾರದ ಮೇಲೆ ಕ್ರೀಡೆಗಳನ್ನು ಆಯೋಜಿಸಿ ಆಯ್ಕೆಯಾದವರನ್ನು ಜಿಲ್ಲಾಮಟ್ಟಕ್ಕೆ, ಅಲ್ಲಿಂದ ಮೈಸೂರಿನಲ್ಲಿ ನಡೆಯುವ ಕ್ರೀಡಾಕೂಟಕ್ಕೆ ಕಳಿಸಬೇಕು. ಆದರೆ ಕೇವಲ ಆಯ್ದ ಶಾಲಾ- ಕಾಲೇಜಿನ ಮಕ್ಕಳನ್ನು ಕ್ರೀಡಾಕೂಟದಲ್ಲಿ ಆಡಿಸುವ ಮೂಲಕ ಯುವಜನ ಸೇವಾ, ಕ್ರೀಡಾ ಸಬಲೀಕರಣ ಇಲಾಖೆಯ ಅಧಿಕಾರಿಗಳು ದಸರಾ ಕ್ರೀಡಾಕೂಟ ನಿರ್ಲಕ್ಷಿಸಿದ್ದಾರೆ ಎಂದು ಕ್ರೀಡಾಪಟುಗಳು ಆರೋಪಿಸಿದ್ದಾರೆ.
ಪ್ರಚಾರದ ಕೊರತೆಯಿಂದಾಗಿ ಸಾರ್ವಜನಿಕರು ಕ್ರೀಡಾಕೂಟದಲ್ಲಿ ಭಾಗಿಯಾಗಿಲ್ಲ ಎನ್ನಲಾಗುತ್ತಿದ್ದು, ಭಾನುವಾರ ಕ್ರೀಡಾಕೂಟಕ್ಕೆ ಶಾಸಕ ಪರಣ್ಣ ಮುನವಳ್ಳಿ ಶಾಟ್ಪುಟ್ ಎಸೆಯುವ ಮೂಲಕ ಚಾಲನೆ ನೀಡಿದರು.