ಕರ್ನಾಟಕ

karnataka

ETV Bharat / state

ಕಡಲೆ ಬೆಳೆಗೆ ಹಸಿರು ಕೀಟದ ಕಾಟ: ಕ್ರಿಮಿನಾಶಕ ದಾಸ್ತಾನಿಲ್ಲದೇ ಅನ್ನದಾತ ಕಂಗಾಲು - ಪ್ರಫೀನೋಫಾಸ್ ಕೀಟನಾಶಕ

ರೈತರು ಕಷ್ಟದ ನಡುವೆಯೂ ಬಿತ್ತನೆ ಮಾಡಿದ್ದ ಕಡಲೆ ಬೆಳೆಗೆ ಕೀಟಗಳ ಬಾಧೆ ಆರಂಭವಾಗಿದ್ದು, ಇದರ ನಿಯಂತ್ರಣಕ್ಕಾಗಿ ಅಗತ್ಯವಾಗಿ ಬೇಕಾಗಿದ್ದ ಪ್ರಫೀನೋಫಾಸ್ ಎಂಬ ಕೀಟನಾಶಕದ ಕೊರತೆ ಎದುರಾಗಿದೆ. ರೈತ ಸಂಪರ್ಕ ಕೇಂದ್ರದಲ್ಲಿ ದಾಸ್ತಾನಿಲ್ಲದೇ ರೈತರು ಹೆಚ್ಚಿನ ಬೆಲೆಗೆ ಕೊಳ್ಳಬೇಕಾಗಿದೆ.

lack-of-pesticides-in-farmers-connection-center
ಕಡಲೆ ಬೆಳೆಗೆ ವಕ್ಕರಿಸಿದ ಹಸಿರು ಕೀಟ

By

Published : Nov 2, 2020, 1:59 PM IST

ಕುಷ್ಟಗಿ (ಕೊಪ್ಪಳ):ಹಿಂಗಾರು ಹಂಗಾಮಿನ ಕಡಲೆ ಬೆಳೆಗೆ ಹಸಿರು ಕೀಟದ ಬಾಧೆ ಆರಂಭವಾಗಿದೆ. ಇದರ ನಿಯಂತ್ರಣಕ್ಕಾಗಿ ಪ್ರಫೀನೋಫಾಸ್ ಕೀಟನಾಶಕ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಾಗದೇ ಇರುವುರಿಂದ ರೈತರ ಚಿಂತೆಗೀಡಾಗಿದ್ದಾರೆ.

ಬಿತ್ತನೆಯಾದ 20ರಿಂದ 25 ದಿನದ ಕಡಲೆ ಬೆಳೆಗೆ ಎಲೆ ತಿನ್ನುವ ಹಸಿರು ಕೀಟ ಬಾಧೆ ಕಂಡು ಬಂದಿದೆ. ತಕ್ಷಣವೇ ನಿಯಂತ್ರಿಸಲು ಪ್ರಫೀನೋಫಾಸ್ ಕೀಟನಾಶಕ ಸಿಂಪಡಿಸಬೇಕಿದೆ. ರೈತ ಸಂಪರ್ಕ ಕೇಂದ್ರದಲ್ಲಿ ಕಡಿಮೆ ಬೆಲೆಗೆ ಲಭ್ಯವಿದ್ದು, ಆದರೆ ಒಮ್ಮೆಲೆ ಬೇಡಿಕೆ ಹೆಚ್ಚಾದ ಕಾರಣ ಕ್ರಿಮಿನಾಶಕದ ಕೊರತೆ ಎದುರಾಗಿದೆ.

ಕಡಲೆ ಬೆಳೆಗೆ ಕ್ರಿಮಿನಾಶಕ ಸಿಂಪಡಿಸುತ್ತಿರುವ ರೈತರು

ಹೀಗಾಗಿ ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಪ್ರಫೀನೋಫಾಸ್​​​ಗೆ ಕಾಯದೇ ದುಬಾರಿ ಬೆಲೆಗೆ ಖರೀದಿಸಿ ಕಡಲೆ ಬೆಳೆ ರಕ್ಷಣೆಗೆ ಮುಂದಾಗಿದ್ದಾರೆ. ಪ್ರಫೀನೋಫಾಸ್ ರೈತ ಸಂಪರ್ಕ ಕೇಂದ್ರದಲ್ಲಿ ಪ್ರತಿ ಲೀಟರ್​​​ಗೆ 440 ರೂ. ಇದ್ದರೆ, ಖಾಸಗಿಯಾಗಿ 550 ರೂಪಾಯಿಗೆ ಲಭ್ಯವಾಗುತ್ತಿದೆ. ಕೂಡಲೇ ಪ್ರಫಿನೋಫಾಸ್ ಕೀಟನಾಶಕವನ್ನು ಬೇಡಿಕೆಗೆ ಅನುಗುಣವಾಗಿ ದಾಸ್ತಾನು‌‌ ಮಾಡಿಕೊಳ್ಳಬೇಕೆಂದು ರೈತರ ಆಗ್ರಹವಾಗಿದೆ.

ABOUT THE AUTHOR

...view details