ಕರ್ನಾಟಕ

karnataka

ETV Bharat / state

ಸುರಕ್ಷಾ ಸಾಧನಗಳಿಲ್ಲದೆ ಚರಂಡಿ ಸ್ವಚ್ಛಗೊಳಿಸಿದ ಕಾರ್ಮಿಕರು... ಇದಕ್ಕೆ ಹೊಣೆ ಯಾರು?

ಪೌರ ಕಾರ್ಮಿಕರಿಗೆ ಕನಿಷ್ಠ ಹ್ಯಾಂಡ್​​ ಗ್ಲೌಸ್​ಗಳನ್ನು ನೀಡದೆ ಚರಂಡಿಗಳಿಗೆ ಇಳಿಸಿ ತ್ಯಾಜ್ಯ ವಿಲೇವಾರಿ ಮಾಡಿಸಿರುವ ಘಟನೆ ಗಂಗಾವತಿಯಲ್ಲಿ ಬೆಳಕಿಗೆ ಬಂದಿದೆ.

By

Published : Dec 13, 2019, 8:11 AM IST

Updated : Dec 13, 2019, 8:44 AM IST

glouse
ಪೌರ ಕಾರ್ಮಿಕರಿಗೆ ಗ್ಲೌಸ್ ಕೂಡ ನೀಡಿಲ್ಲ..!

ಗಂಗಾವತಿ/ಕೊಪ್ಪಳ: ಪೌರ ಕಾರ್ಮಿಕರಿಗೆ ಕನಿಷ್ಠ ಹ್ಯಾಂಡ್​ ಗ್ಲೌಸ್​ಗಳನ್ನು ನೀಡದೆ ಒಳ ಚರಂಡಿ ತ್ಯಾಜ್ಯ ವಿಲೇವಾರಿ ಮಾಡಿಸಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಬೆಳಕಿಗೆ ಬಂದಿದೆ.

ಸಫಾಯಿ ಕರ್ಮಚಾರಿಗಳನ್ನು ಕರ್ತವ್ಯಕ್ಕೆ ಕಳಿಸುವ ಮುನ್ನ ಅವರಿಗೆ ದೇಹ ಮತ್ತು ಆರೋಗ್ಯದ ಸುರಕ್ಷತಾ ದೃಷ್ಟಿಯಿಂದ ಸಾಕಷ್ಟು ಮುಂಜಾಗ್ರತೆ ಕೈಗೊಳ್ಳಬೇಕು ಎಂಬ ನಿಯಮವಿದೆ. ಆದರೆ ನಗರದಲ್ಲಿ ಚರಂಡಿ ಕಾಮಗಾರಿ ಮಾಡುತ್ತಿರುವ ಕಾರ್ಮಿಕರಿಗೆ ಯಾವುದೇ ಕನಿಷ್ಠ ಮಟ್ಟದ ಸುರಕ್ಷತಾ ಸಾಧನಗಳನ್ನು ನೀಡದೆ ಕೆಲಸ ಮಾಡಿಸಲಾಗ್ತಿದೆ ಎನ್ನಲಾಗಿದೆ.

ಸುರಕ್ಷಾ ಸಾಧನಗಳಿಲ್ಲದೆ ಚರಂಡಿ ಸ್ವಚ್ಛಗೊಳಿಸಿದ ಪೌರ ಕಾರ್ಮಿಕರು

ನಗರದ ತಂದೊಡ್ಡಿರ ವೃತ್ತದ ಶಾಸಕರ ಮಾದರಿ ಹೆಣ್ಣುಮಕ್ಕಳ ಸರ್ಕಾರಿ ಪ್ರಾಥಮಿಕ ಶಾಲೆಯ ಪಕ್ಕದಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿಯಲ್ಲಿ ನೇರವಾಗಿ ಚರಂಡಿಯೊಳಗೆ ಕಾರ್ಮಿಕರನ್ನು ಇಳಿಸಿ ಕೆಲಸ ಮಾಡಿಸಲಾಗಿದೆ. ಕೈಗಳಿಗೆ ಗ್ಲೌಸ್, ಕಾಲಿಗೆ ಶೂ ಹಾಗೂ ಮೂಗಿಗೆ ಕಟ್ಟಿಕೊಳ್ಳಲು ಮಾಸ್ಕ್ ನೀಡಬೇಕಿರುವುದು ಅಗತ್ಯ. ಆದರೆ ಈ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲದ ಕಾರ್ಮಿಕರು ಬರಿಗೈಯಲ್ಲಿ ಚರಂಡಿಯಲ್ಲಿನ ತ್ಯಾಜ್ಯ ಎತ್ತುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಗಮನಿಸಬೇಕಾದ ನಗರಸಭೆಯ ಅಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಕೂಡ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಮಾನವ ತ್ಯಾಜ್ಯ ಸೇರಿದಂತೆ ಕಸಕಡ್ಡಿ, ಬೇಡವಾದ ವಸ್ತುಗಳು ಚರಂಡಿ ಸೇರುತ್ತಿವೆ. ಬ್ಲೇಡ್, ಒಡೆದ ಗಾಜು ಮತ್ತಿತರ ವಸ್ತುಗಳು ಇರುತ್ತವೆ. ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಮೊದಲು ಕಾರ್ಮಿಕರ ಆರೋಗ್ಯ ಹಾಗೂ ಸುರಕ್ಷತೆ ಬಗ್ಗೆ ಗಮನಹರಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Last Updated : Dec 13, 2019, 8:44 AM IST

ABOUT THE AUTHOR

...view details