ಕರ್ನಾಟಕ

karnataka

ETV Bharat / state

ಕುಷ್ಟಗಿ: ಸೋಲಾರ್ ಗ್ರೀಡ್​ನಲ್ಲಿ ಕಾರ್ಮಿಕ ನೀತಿ ಉಲ್ಲಂಘನೆ ಆರೋಪಿಸಿ ಪ್ರತಿಭಟನೆ - Res Power Infa Private Limited Company

ಕುಷ್ಟಗಿ ತಾಲೂಕಿನ ಗುಮಗೇರಾ ಸೀಮಾದಲ್ಲಿ ರೆಸ್ ಪವರ್ ಇನ್ಫಾ ಪ್ರೈವೈಟ್ ಲಿಮಿಟೆಡ್ ಕಂಪನಿ ಸೋಲಾರ್​ ಪವರ್ ಗ್ರೀಡ್​ನಲ್ಲಿ ಸೇವಾ ಭದ್ರತೆ ನೀಡುತ್ತಿಲ್ಲ ಎಂದು ಆರೋಪಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.

dfds
ಸೋಲಾರ್ ಗ್ರಿಡ್​ನಲ್ಲಿ ಕಾರ್ಮಿಕ ನೀತಿ ಉಲ್ಲಂಘನೆ ಆರೋಪ

By

Published : Jul 19, 2020, 12:44 AM IST

ಕುಷ್ಟಗಿ (ಕೊಪ್ಪಳ): ತಾಲೂಕಿನ ಗುಮಗೇರಾ ಸೀಮಾದಲ್ಲಿ ರೆಸ್ ಪವರ್ ಇನ್ಫಾ ಪ್ರೈವೈಟ್ ಲಿಮಿಟೆಡ್ ಕಂಪನಿ ಸೋಲಾರ್​ ಪವರ್ ಗ್ರೀಡ್​ನಲ್ಲಿ ಸೇವಾ ಭದ್ರತೆ ಇಲ್ಲದೇ ಕೆಲಸಕ್ಕೆ ಬಳಸಿಕೊಳ್ಳುವುದನ್ನು ವಿರೋಧಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.

ಸೋಲಾರ್ ಗ್ರಿಡ್​ನಲ್ಲಿ ಕಾರ್ಮಿಕ ನೀತಿ ಉಲ್ಲಂಘನೆ ಆರೋಪ

ಪಯನೀಯರ್ ಸೆಲ್ಸೂಷನ್ ಸೆಕ್ಯೂರಿಟಿ ಏಜೆನ್ಸಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು, ಸ್ಥಳಿಯ ಭದ್ರತಾ ಸಿಬ್ಬಂದಿ, ಮೇಲ್ವಿಚಾರಕರು ಹಾಗೂ ಕಾರ್ಮಿಕರು ಸೇರಿದಂತೆ 46 ಜನ ಕೆಲಸ ಮಾಡುತ್ತಿದ್ದಾರೆ. ಯಾವುದೇ ಪಿಎಫ್, ಇಎಸ್​​ಐ. ಕನಿಷ್ಟ ಸೇವಾ ಪಿಂಚಣಿ ಸೌಕರ್ಯಗಳಿಲ್ಲ. ಸರ್ಕಾರದ ನಿಯಮಾವಳಿ ಪ್ರಕಾರ ಗರಿಷ್ಠ 8 ತಾಸು ಬದಲಿಗೆ ವಿಶ್ರಾಂತಿ ರಹಿತವಾಗಿ 12 ತಾಸು ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕಳೆದೆರೆಡು ವರ್ಷಗಳಿಂದ ಹರಿಯರ್ಸ್​, ವೇತನ ಹೆಚ್ಚಳ, ಬೋನಸ್ ಮೊದಲಾದ ಹೊರಗುತ್ತಿಗೆ ಸೇವಾ ಸವಲತ್ತುಗಳಿಂದ ಹೊರತಾಗಿದೆ. ಪ್ರಶ್ನಿಸಿದರೆ ಕೆಲಸದಿಂದ ವಜಾ ಮಾಡುತ್ತಿದ್ದಾರೆ ಎಂದು ಭದ್ರತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿರುವ ಮಾಜಿ ಸೈನಿಕ ಬಸನಗೌಡ ಆರೋಪಿಸಿದರು.

ಕುಷ್ಟಗಿಯ ಪ್ರವಾಸಿ ಮಂದಿರದಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್​ ಸಮ್ಮುಖದಲ್ಲಿ ಸೇವಾ ಭದ್ರತಾ ಸವಲತ್ತು ಕಲ್ಪಿಸುವ ಕುರಿತು ಲಿಖಿತ ಭರವಸೆ ನೀಡಿದ್ದರು. ಆದರೆ ಒಂದೂವರೆ ತಿಂಗಳಾದರೂ ಸಂಬಂಧವೇ ಇಲ್ಲವೇನೋ ಎನ್ನುವಂತೆ ವರ್ತಿಸುತ್ತಿದ್ದಾರೆ ಗಂಭೀರವಾಗಿ ಆರೋಪಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details