ಕರ್ನಾಟಕ

karnataka

ETV Bharat / state

ಸ್ಮಶಾನ ಭೂಮಿ ಪರಭಾರೆ ಖಂಡಿಸಿ ನಿಡಶೇಸಿ ಗ್ರಾಮಸ್ಥರ ಪ್ರತಿಭಟನೆ - ಸ್ಮಶಾನ ಜಾಗಕ್ಕಾಗಿ ಪ್ರತಿಭಟನೆ

ರುದ್ರಭೂಮಿಗೆ ತಾಲೂಕಾಡಳಿತ ಹಸ್ತಕ್ಷೇಪ ಮತ್ತು ಶವ ಸಂಸ್ಕಾರದ ಭೂಮಿಯನ್ನು ವಾಣಿಜ್ಯೀಕರಣಕ್ಕೆ ಬಳಸದೇ ಗ್ರಾಮಕ್ಕೆ ಬಿಟ್ಟುಕೊಡಬೇಕೆಂದು ಆಗ್ರಹಿಸಿ ನಿಡಶೇಸಿ ಗ್ರಾಮಸ್ಥರು ಕುಷ್ಟಗಿ ತಹಶೀಲ್ದಾರ ಕಛೇರಿವರೆಗೆ ಪಾದಯಾತ್ರೆ ನಡೆಸಿದರು. ತಹಶಿಲ್ದಾರ ಕಛೇರಿ ಆವರಣದಲ್ಲಿ ಅಣಕು ಶವದೊಂದಿಗೆ ಪ್ರತಿಭಟಿಸಿದರು.

kustagi nidsheshi villagers protest for graveyard
ನಿಡಶೇಸಿ ಗ್ರಾಮಸ್ಥರ ಪ್ರತಿಭಟನೆ

By

Published : Nov 26, 2021, 6:19 PM IST

ಕುಷ್ಟಗಿ: ತಾಲೂಕಿನ ನಿಡಶೇಸಿ ಗ್ರಾಮದ ರುದ್ರಭೂಮಿ ತಾಲೂಕಾಡಳಿತ ಹಸ್ತಕ್ಷೇಪದ ಹಿನ್ನೆಲೆಯಲ್ಲಿ ಖಾಸಗಿಯವರಿಗೆ ವ್ಯವಸ್ಥಿತವಾಗಿ ಪರಭಾರೆಯಾಗಿದೆ. ಶವ ಸಂಸ್ಕಾರದ ಭೂಮಿಯನ್ನು ವಾಣಿಜ್ಯೀಕರಣಕ್ಕೆ ಬಳಸದೇ ಗ್ರಾಮಕ್ಕೆ ಬಿಟ್ಟುಕೊಡಬೇಕೆಂದು ಆಗ್ರಹಿಸಿ ನಿಡಶೇಸಿ ಗ್ರಾಮಸ್ಥರು ಕುಷ್ಟಗಿ ತಹಶೀಲ್ದಾರ ಕಛೇರಿವರೆಗೆ ಪಾದಯಾತ್ರೆ ನಡೆಸಿದರು.


ಶುಕ್ರವಾರ ಬೆಳಗ್ಗೆ ಗ್ರಾಮದ ಹೊರವಲಯದ ರುದ್ರಭೂಮಿಯಿಂದ ಆರಂಭಗೊಂಡ ಪಾದಯಾತ್ರೆ ತಾಲೂಕಾಡಳಿತದ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ತಹಶೀಲ್ದಾರ ಕಛೇರಿ ಆವರಣದಲ್ಲಿ ಅಣಕು ಶವದೊಂದಿಗೆ ಪ್ರತಿಭಟಿಸಿದರು.

ನಿಡಶೇಸಿ ಗ್ರಾಮದ ಹೊರವಲಯದಲ್ಲಿರುವ ಸರ್ವೇ ನಂ 114/1, 114/2 ಹಾಗೂ 114/3 ಒಟ್ಟು 2 ಎಕರೆ 17 ಗುಂಟೆ ಜಮೀನು ಕಳೆದ 200 ವರ್ಷಗಳಿಂದ ಗ್ರಾಮದ ರುದ್ರಭೂಮಿಯಾಗಿದೆ. ಗ್ರಾಮಸ್ಥರ ಭಾವನಾತ್ಮಕ ಸಂಬಂಧದ ಈ ಭೂಮಿಯನ್ನು ಸ್ಥಳೀಯರಲ್ಲದವರು ಮೂಲ ಜಮೀನ್ದಾರರಿಂದ ಪ್ರಭಾವಿ ಡಿವೈಎಸ್ಪಿ ಹುದ್ದೆಯಲ್ಲಿರುವ ವ್ಯಕ್ತಿ ಖರೀದಿಸಿ ಅದೆ ಜಾಗದಲ್ಲಿ ನಿವೇಶನ ವಿನ್ಯಾಸಕ್ಕೆ ಮುಂದಾಗಿದ್ದಾರೆ. ಸದರಿ ಜಮೀನು ಉಳಿಸುವ ಸಲುವಾಗಿ ಸಚಿವ ಹಾಲಪ್ಪ ಆಚಾರ್, ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಮನವಿ ಸಲ್ಲಿಲಾಗಿದೆ.

ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಾಳ್ಕರ್ ಅವರು ಪ್ರಕರಣದ ವಿಚಾರಣೆಗೆ ಎರಡು ಬಾರಿ ಸಭೆ ನಿಗದಿಯಾಗಿದ್ದರೂ, ಯಾವುದೇ ಸ್ಪಷ್ಟ ನಿರ್ಣಯ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಡೆ ಅನುಮಾನ ಹುಟ್ಟಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹೋರಾಟ ತೀವ್ರ ಸ್ವರೂಪಕ್ಕೆ ಕೊಂಡೊಯ್ಯಲು ಪಾದಯಾತ್ರೆಗೆ ಮುಂದಾಗಿದ್ದಾರೆ. ಗ್ರಾಮದ ಏಕೈಕ ರುದ್ರಭೂಮಿ ಆಗಿದ್ದು, ಈಗ ಯಾರಾದರೂ ಸತ್ತರೆ ಹೆಣ ಹೂಳಲು ಜಾಗ ಇಲ್ಲ. ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಯಾರಾದರೂ ಸತ್ತರೆ ತಹಶೀಲ್ದಾರ ಕಛೇರಿ ಆವರಣದಲ್ಲಿ ಶವ ಸಂಸ್ಕಾರ ಮಾಡಲಿದ್ದೇವೆ.

ಈ ಹೋರಾಟದಲ್ಲಿ‌ಪ್ರಾಣ ತ್ಯಾಗಕ್ಕೆ ಸಿದ್ದರಿದ್ದೇವೆ ಎಂದು ಗ್ರಾಮದ ರಾಮಣ್ಣ ಬಂಡಿಹಾಳ ಮಂಜುನಾಥ ಕೆ.ಬಿ. ಮಂಜುನಾಥ ನಾಲಗಾರ, ಆರ್.ಕೆ.ದೇಸಾಯಿ ಎಚ್ಚರಿಸಿದರು. ಈ ಹೋರಾಟಕ್ಕೆ ಸ್ಪಂದಿಸದೇ ಇದ್ದಲ್ಲಿ ಅನಿರ್ದಿಷ್ಟಾವಧಿ ಹಾಗೂ ಅಮರಣಾಂತ ಅನಿವಾರ್ಯವಾಗಲಿದ್ದು, ಸ್ಮಶಾನ ಭೂಮಿ ಎನ್.ಎ.ರದ್ದತಿಗೆ ಒತ್ತಾಯಿಸಿದರು.

ABOUT THE AUTHOR

...view details