ಕರ್ನಾಟಕ

karnataka

ETV Bharat / state

'ಏ.11ರಿಂದ ನೂರಕ್ಕೂ ಹೆಚ್ಚು ಜನ ಒಂದೆಡೆ ಸೇರಿ ಕೆಲಸ ಮಾಡುವವರಿಗೆ ಲಸಿಕೆ' - Dr. Ananda Gotturu

ಕುಷ್ಟಗಿ ತಾಲೂಕಿನಲ್ಲಿ 60ರ‌ ವಯೋಮಾನದವರಿಗೆ ಇಲ್ಲಿಯವರೆಗೆ ಶೇ.52 ರಷ್ಟು ಲಸಿಕೆ ಹಾಕಲಾಗಿದೆ. ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 45ರ ವಯೋಮಾನದವರಿಗೆ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಆದರೆ ಕುಷ್ಟಗಿ ಜನರು ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ ಎಂದು ವೈದ್ಯಾಧಿಕಾರಿ ಡಾ.ಆನಂದ ಗೋಟೂರು ತಿಳಿಸಿದ್ದಾರೆ.

ತಾಲೂಕು ವೈದ್ಯಾಧಿಕಾರಿ ಡಾ.ಆನಂದ ಗೋಟೂರು
ತಾಲೂಕು ವೈದ್ಯಾಧಿಕಾರಿ ಡಾ.ಆನಂದ ಗೋಟೂರು

By

Published : Apr 9, 2021, 11:25 AM IST

ಕುಷ್ಟಗಿ: ಏ.11 ರಿಂದ ನೂರಕ್ಕೂ ಹೆಚ್ಚು ಜನ ಒಂದೇ ಸ್ಥಳದಲ್ಲಿ ಕೆಲಸ ಮಾಡುವವರಿಗೆ ಕೋವ್ಯಾಕ್ಸಿನ್ ಲಸಿಕೆ ಹಾಕುವ ಯೋಜನೆ ಇದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಆನಂದ ಗೋಟೂರು ಹೇಳಿದರು.

ಈಟಿವಿ ಭಾರತದೊಂದಿಗೆ ಮಾತನಾಡಿದ ಆನಂದ ಗೋಟೂರು

ಕುಷ್ಟಗಿಯಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ 60ರ‌ ವಯೋಮಾನದವರಿಗೆ ಇಲ್ಲಿಯವರೆಗೆ ಶೇ.52 ರಷ್ಟು ಲಸಿಕೆ ಹಾಕಲಾಗಿದೆ. ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 45ರ ವಯೋಮಾನದವರಿಗೆ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಕುಷ್ಟಗಿ ಜನರು ಲಸಿಕೆ ಪಡೆಯಲು ಹಿಂಜರಿಯುತ್ತಿದ್ದು, ಪುರಸಭೆ ಅಧ್ಯಕ್ಷ ಹಾಗೂ ಸದಸ್ಯರ ಸಭೆ ಕರೆದು, ವಾರ್ಡ್​ ವ್ಯಾಪ್ತಿಯಲ್ಲಿ‌ ಲಸಿಕೆ ಹಾಕಿಸಿಕೊಳ್ಳಲು ಮನವೋಲಿಸಲಾಗುತ್ತಿದೆ. ಜೊತೆಗೆ ನೂರಕ್ಕೂ ಹೆಚ್ಚು ಜನ ಒಂದೇ ಸ್ಥಳದಲ್ಲಿ ಕೆಲಸ ಮಾಡುವವರಿಗೆ ಉದಾಹರಣೆಗೆ ನರೇಗಾ ಯೋಜನೆಯಡಿ ಒಂದೇ ಕಡೆ ಕೆಲಸ ಮಾಡುವವರಿಗೆ ಲಸಿಕೆ ಹಾಕುವ ಯೋಜನೆ ಇದೆ ಎಂದು ಹೇಳಿದರು.

ತಾಲೂಕಿನಲ್ಲಿ 52 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, 12 ಮಂದಿ ಗುಣಮುಖರಾಗಿದ್ದಾರೆ. 40 ಸಕ್ರೀಯ ಪ್ರಕರಣಗಳಿದ್ದು, ಹೋಂ ಐಸೋಲೇಶನ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಜನರು ತಪ್ಪದೆ ಮಾಸ್ಕ್ ಧರಿಸಬೇಕು, ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.

ABOUT THE AUTHOR

...view details