ಕರ್ನಾಟಕ

karnataka

ETV Bharat / state

ಕುಷ್ಟಗಿ ಮಾರುತಿ ವೃತ್ತದ ಹೈಮಾಸ್ಟ್ ವಿದ್ಯುತ್​ ದೀಪಕ್ಕೆ ದುರಸ್ತಿ ಭಾಗ್ಯ - ಕುಷ್ಟಗಿ ಹೈಮಾಸ್ಟ್ ವಿದ್ಯುತ್​ ದೀಪ ದುರಸ್ಥಿ

ಈಟಿವಿ ಭಾರತ ವರದಿ ಬೆನ್ನಲ್ಲೆ ಎಚ್ಚೆತ್ತ ಕುಷ್ಟಗಿ ಪುರಸಭೆ, ಕೆಟ್ಟು ನಿಂತಿದ್ದ ಹೈಮಾಸ್ಟ್​​​ ವಿದ್ಯುತ್​ ದೀಪದ ಕಂಬವನ್ನು ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ ಅವರ ಸಮಕ್ಷಮದಲ್ಲಿ ದುರಸ್ತಿಗೊಳಿಸಲಾಯಿತು.

kustagi-municipality-repaired-highmast-electric-lamp
ಹೈಮಾಸ್ಟ್ ವಿದ್ಯುತ್​ ದೀಪಕ್ಕೆ ದುರಸ್ಥಿ

By

Published : Nov 8, 2020, 7:52 PM IST

ಕುಷ್ಟಗಿ (ಕೊಪ್ಪಳ): ಪಟ್ಟಣದ ಮಾರುತಿ ವೃತ್ತದಲ್ಲಿ ಕೆಟ್ಟು ನಿಂತಿದ್ದ ಹೈಮಾಸ್ಟ್ ವಿದ್ಯುತ್​​ ದೀಪವನ್ನು ಕುಷ್ಟಗಿ ಪುರಸಭೆ ದುರಸ್ತಿಗೊಳಿಸುವ ಕ್ರಮ ಕೈಗೊಂಡಿದೆ.

ಪುರಸಭೆ ಮುಖ್ಯಾಧಿಕಾರಿ ನಿರ್ಲಕ್ಷ ಹಿನ್ನೆಲೆ ಕಳೆದ ಐದಾರು ತಿಂಗಳಿನಿಂದ ದುರಸ್ತಿಯಾಗದೇ ಧೂಳು ಹಿಡಿದು ನಿಂತಿದ್ದ ಹೈಮಾಸ್ಟ್​​ ವಿದ್ಯುತ್​ ದೀಪದ ಕುರಿತು ಈಟಿವಿ ಭಾರತ ವರದಿ ಪ್ರಸಾರ ಮಾಡಿತ್ತು. ವರದಿ ಬೆನ್ನಲ್ಲೇ ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ ಅವರ ಸಮಕ್ಷಮದಲ್ಲಿ ದುರಸ್ತಿಗೊಳಿಸಲಾಯಿತು.

ಕುಷ್ಟಗಿ ಮಾರುತಿ ವೃತ್ತದ ಹೈಮಾಸ್ಟ್ ವಿದ್ಯುತ್​ ದೀಪಕ್ಕೆ ದುರಸ್ಥಿ ಭಾಗ್ಯ

ಇದನ್ನು ಓದಿ-ಕುಷ್ಟಗಿಯಲ್ಲಿ ಕೆಟ್ಟುನಿಂತ ವಿದ್ಯುದ್ದೀಪಗಳು: ಸಾರ್ವಜನಿಕರ ಅಸಮಾಧಾನ

ಈ ಕುರಿತು ಮಾತನಾಡಿದ ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ, ಹೈಮಾಸ್ಟ್ ಕಂಬದಿಂದ ವಿದ್ಯುದ್ದೀಪದ ಗುಚ್ಛ ಕೆಳಗೆ ಇಳಿಸಿದ ಸಂದರ್ಭದಲ್ಲಿ ಮೇಲಕ್ಕೇರಿಸುವ ರೋಪ್ ವಾಯರ್ ಕಟ್ ಆಗಿತ್ತು. ಎಲ್ಲಿಯೂ ಸಿಕ್ಕಿರಲಿಲ್ಲ. ಬೆಂಗಳೂರಿನಿಂದ ತರಿಸಿ ದುರಸ್ತಿಗೊಳಿಸಲಾಗಿದೆ ಎಂದು ತಿಳಿಸಿದರು. ಈಟಿವಿ ಭಾರತ ವರದಿ ಪ್ರತಿಫಲಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

For All Latest Updates

TAGGED:

ABOUT THE AUTHOR

...view details