ಕುಷ್ಟಗಿ: ರೈತ ಸಂಪರ್ಕ ಕೇಂದ್ರದಲ್ಲಿ ರೈತರು ಟಾರ್ಪಲ್ಗೆ ಮುಗಿಬಿದ್ದಿದ್ದು, ರೈತರ ಬೇಡಿಕೆಗೆ ಅನುಗುಣವಾಗಿ ಟಾರ್ಪಲ್ ತರಿಸದೇ ಕೊರತೆ ಉಂಟಾಗಿದ್ದು, ರೈತರಿಂದ ಅಸಮಾಧಾನ ವ್ಯಕ್ತವಾಗಿದೆ.
ಓದಿ: ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ: ಬೆಂಗಳೂರಿನ ಕಚೇರಿಗೆ ಬಿಗಿ ಭದ್ರತೆ

2020-21ನೇ ಸಾಲಿನಲ್ಲಿ ಕುಷ್ಟಗಿ ರೈತ ಸಂಪರ್ಕ ಕೇಂದ್ರಕ್ಕೆ ಸಾಮಾನ್ಯ ರೈತರಿಗಾಗಿ 575, ಎಸ್ಸಿ ರೈತರಿಗೆ 22, ಎಸ್ಟಿ ರೈತರಿಗೆ 7 ಬಂದಿವೆ. ಇದರಲ್ಲಿ ಸಾಮಾನ್ಯ ರೈತರಿಗೆ 1,000 ರೂ. ದರದಲ್ಲಿ ದಾಖಲಾತಿ ಪಡೆದು ನೀಡಲಾಗುತ್ತಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಟಾರ್ಪಲ್ ಬಾರದಿರುವುದು ಸಿಕ್ಕವರಿಗೆ ಸೀರುಂಡೆ ಆಗಿದೆ.
ರೈತರು ಈ ವರ್ಷವೂ ಸಿಗುವುದಿಲ್ಲವೆಂದು ಬಿಸಿಲನ್ನೂ ಲೆಕ್ಕಿಸದೇ ನಿಂತಿರುವುದು ಕಂಡು ಬಂತು. ಇದೇ ವೇಳೆ ಕೆಲ ರೈತರು ಟಾರ್ಪಲ್ಗೆ ರಶೀದಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಪ್ರತಿ ಟಾರ್ಪಲ್ಗೆ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿ ಬಂತು.
ಇದಕ್ಕೆ ಪ್ರತಿಕ್ರಿಯಿಸಿದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ, ಹೆಚ್ಚುವರಿ ದರ ವಸೂಲಿ ಆರೋಪವನ್ನು ತಳ್ಳಿಹಾಕಿದ್ದಾರೆ. ರಶೀದಿ ನೀಡಿದರೆ ಜಿಎಸ್ಟಿ ಸೇರಿ ಹೆಚ್ಚುವರಿ ದರವಾಗುತ್ತದೆ. ಹೀಗಾಗಿ 1 ಸಾವಿರ ರೂ. ನಿಗದಿತ ದರದಲ್ಲಿ ವಿತರಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.