ಕರ್ನಾಟಕ

karnataka

ETV Bharat / state

ಗುಜರಾತ್​​ಗೆ ಸಾಗಿಸುತ್ತಿದ್ದ 8 ಲಕ್ಷ ಮೌಲ್ಯದ ಅನ್ನಭಾಗ್ಯ ಅಕ್ಕಿ ವಶ - kustagi

ಗುಜರಾತ್​​ಗೆ ಸಾಗಿಸುತ್ತಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕುಷ್ಟಗಿ ಆಹಾರ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

kustagi
ಅನ್ನಭಾಗ್ಯ ಅಕ್ಕಿ ವಶ

By

Published : Sep 30, 2021, 4:50 PM IST

ಕುಷ್ಟಗಿ(ಕೊಪ್ಪಳ):ಅಕ್ರಮವಾಗಿಗಂಗಾವತಿಯಿಂದ ಕುಷ್ಟಗಿ ಮೂಲಕ ಗುಜರಾತ್​​ಗೆ ಸಾಗಿಸುತ್ತಿದ್ದ 340 ಕ್ವಿಂಟಲ್ ಅನ್ನಭಾಗ್ಯ ಅಕ್ಕಿಯನ್ನು ಹೆದ್ದಾರಿ ವಣಗೇರಾ ಟೋಲ್ ಪ್ಲಾಜಾ ಬಳಿ ಕುಷ್ಟಗಿ ಆಹಾರ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ದೂರು ಪ್ರತಿ

ಗಂಗಾವತಿಯ ಅಭಿಜಿತ್ ಟ್ರೇಡರ್ಸ್ ನಿಂದ ಗುಜರಾತ್ ಜಟಿಲಪುರ ವಿನಲ್ ರೈಸ್ ಮಿಲ್​​ಗೆ RJ-GA-118 ಲಾರಿಯಲ್ಲಿ 50 ಕೆ.ಜಿ 680 ಚೀಲಗಳಲ್ಲಿ 340 ಕ್ವಿಂಟಲ್ ಅಕ್ಕಿಯನ್ನು ಸಾಗಿಸಲಾಗುತ್ತಿತ್ತು. ಪ್ರತಿ ಕ್ವಿಂಟಲ್​​ಗೆ 2,383 ರೂ ನಂತೆ 8,10,220 ರೂ.ಎಂದು ಅಂದಾಜಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಆಹಾರ ನಿರೀಕ್ಷಕ ನಿತಿನ್ ಅಗ್ನಿ ಅವರು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ರಾಜಸ್ಥಾನ ಮೂಲದ ಲಾರಿ ಚಾಲಕ ಮದನ್ ಲಾಲ್ ಬ್ರಿಜ್ ಲಾಲ್ ಹಾಗೂ ಗಂಗಾವತಿ ಅಭಿಜಿತ್ ಟ್ರೇಡರ್ಸ್ ವಿರುದ್ಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ABOUT THE AUTHOR

...view details