ಕರ್ನಾಟಕ

karnataka

ETV Bharat / state

ಕುಷ್ಟಗಿಯಲ್ಲಿಂದು ತಾಪಂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ - ಕುಷ್ಟಗಿ ತಾಲೂಕು ಪಂಚಾಯತಿ

ಇಂದು ಕುಷ್ಟಗಿ ತಾಲೂಕು ಪಂಚಾಯತಿಯ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಭಾರಿ ಪೈಪೋಟಿ ಕಂಡು ಬಂದಿದೆ.

ಕುಷ್ಟಗಿ
ಕುಷ್ಟಗಿ

By

Published : Sep 7, 2020, 9:35 AM IST

ಕುಷ್ಟಗಿ(ಕೊಪ್ಪಳ): ಕುಷ್ಟಗಿ ತಾಲೂಕು ಪಂಚಾಯತಿಯ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿದ್ದು, ಸ್ವಪಕ್ಷೀಯ ಬಿಜೆಪಿಯಲ್ಲಿ ಪೈಪೋಟಿ ಕಂಡು ಬಂದಿದೆ.

ಕುಷ್ಟಗಿ ತಾಲೂಕಿನ ಅಡವಿಬಾವಿ ತಾ.ಪಂ. ಕ್ಷೇತ್ರದ ಪಕ್ಷೇತರ ಸದಸ್ಯೆ ವಿಶಾಲಾಕ್ಷಿ ಮದ್ನೂರು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಬಾರಿ 10 ತಿಂಗಳ ಕಾಲ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಒಪ್ಪಂದದ ಹಿನ್ನೆಲೆಯಲ್ಲಿ ಅವರ ಅಧಿಕಾರದ ಕಾಲಾವಧಿ ಮುಗಿದಿದ್ದು, ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿದೆ.

ಬಿಜೆಪಿಯಿಂದ ಆಯ್ಕೆಯಾದ 14 ಸದಸ್ಯರಲ್ಲಿ ಆಕಾಂಕ್ಷಿಗಳಿದ್ದು, ಯಾರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎನ್ನುವುದು ಗೊಂದಲದ ಗೂಡಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ, ಮಾಜಿ ದೊಡ್ಡನಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಔಪಚಾರಿಕ ಸಭೆ ನಡೆಸಿದ್ದು, ಸಭೆಯಲ್ಲಿ ದೊಡ್ಡನಗೌಡ ಪಾಟೀಲ ಅವರ ತೀರ್ಮಾನಕ್ಕೆ ಅಲ್ಲಿದ್ದ ಸದಸ್ಯರು ಸಮ್ಮತಿ ವ್ಯಕ್ತಪಡಿಸಿದ್ದು, ಯಾರ ಹೆಸರು ಎಂದು ಅಂತಿಮಗೊಳಿಸಿಲ್ಲ ಎನ್ನಲಾಗಿದೆ.

ಇಂದು ಕೊರೊಡಕೇರಾದಲ್ಲಿರುವ ಮಾಜಿ ಶಾಸಕ ಹನುಮಗೌಡ ಪಾಟೀಲ್ ಫಾರ್ಮ್​ನಲ್ಲಿ ಪುನಃ ಸಭೆ ಸೇರಲು ನಿರ್ಧರಿಸಿದ್ದು, ಅಲ್ಲಿ ಪ್ರಸ್ತಾಪಿಸುವ ಹೆಸರು ಉಪಾಧ್ಯಕ್ಷ ಸ್ಥಾನಕ್ಕೆ ಅಂತಿಮಗೊಳ್ಳಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ABOUT THE AUTHOR

...view details