ಕುಷ್ಟಗಿ (ಕೊಪ್ಪಳ) :ಕೋವಿಡ್ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮದ ಭಯ ಬೇಡ.ಕುಷ್ಟಗಿತಾಲೂಕಿನ ಎಲ್ಲಾ ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ಹಾಕಲಾಗಿದ್ದು, ಯಾರಿಗೂ ಅಡ್ಡ ಪರಿಣಾಮಗಳಾಗಿಲ್ಲ ಎಂದುತಾಲೂಕು ವೈದ್ಯಾಧಿಕಾರಿ ಡಾ.ಆನಂದ್ ಗೋಟೂರು ತಿಳಿಸಿದ್ದಾರೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಜನವರಿ 16 ರಿಂದ ಕೋವಿಡ್ ವ್ಯಾಕ್ಸಿನೇಷನ್ ಆರಂಭವಾಗಿದೆ. ವೈದ್ಯರು, ಆರೋಗ್ಯ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಕುಷ್ಟಗಿತಾಲೂಕಿನ 1,374 ಜನರಿಗೆ ವ್ಯಾಕ್ಸಿನ್ ಹಾಕುವ ಗುರಿ ಹೊಂದಲಾಗಿತ್ತು. ಈ ಪೈಕಿ ಶೇ.65ರಷ್ಟು ಅಂದರೆ 891 ಮಂದಿಗೆ ವ್ಯಾಕ್ಸಿನೇಶನ್ ಪೂರ್ಣಗೊಂಡಿದೆ ಎಂದರು.