ಕುಷ್ಟಗಿ: ಅಕ್ಷರ ದಾಸೋಹ ಯೋಜನೆಯ ನೌಕರರಿಗೆ ಪರಿಹಾರ ನೀಡಬೇಕು ಎಂದು ಬಿಸಿಯೂಟ ನೌಕರರ ಸಂಘದಿಂದ ಯೋಜನಾಧಿಕಾರಿ ಕೆ.ಶರಣಪ್ಪಗೆ ಮನವಿ ಸಲ್ಲಿಸಲಾಯಿತು.
ಕುಷ್ಟಗಿ: ಬಿಸಿಯೂಟ ನೌಕರರಿಗೂ ಪರಿಹಾರ ಘೋಷಿಸುವಂತೆ ಮನವಿ
ಕೋವಿಡ್-19 ಲಾಕ್ಡೌನ್ ಸಂಕಷ್ಟದ ಪರಿಸ್ಥಿತಿಯಲ್ಲೂ ಆಹಾರ ಧಾನ್ಯ ಮನೆ ಮನೆಗೆ ತಲುಪಿಸುವ ಕಾರ್ಯ ನಿರ್ವಹಿಸಿರುವ ಅಕ್ಷರ ದಾಸೋಹ ಸಿಬ್ಬಂದಿಗೆ ಪರಿಹಾರ ನೀಡಬೇಕು ಎಂದು ಕುಷ್ಟಗಿಯಲ್ಲಿ ಮನವಿ ಸಲ್ಲಿಸಲಾಗಿದೆ.
ಬಿಸಿ ಊಟದ ನೌಕರರಿಗೂ ಪರಿಹಾರ ಘೋಷಿಸುವಂತೆ ಮನವಿ
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷೆ ಅನ್ನಪೂರ್ಣ, ಶಾಲೆ ಬಂದ್ ಆಗಿದ್ದರೂ ಸರ್ಕಾರದಿಂದ ಯಾವುದೇ ಪರಿಹಾರವಿಲ್ಲ. ಅಕ್ಷರ ದಾಸೋಹ ಯೋಜನೆಯ ನೌಕರರು ತಿಂಗಳಿಗೆ 2,600ರಿಂದ 2,700 ಕನಿಷ್ಠ ಗೌರವಧನ ಪಡೆಯುತ್ತಿದ್ದಾರೆ.
ಈಗಾಗಲೇ ಮಹಾರಾಷ್ಟ್ರ ಮತ್ತಿತರ ರಾಜ್ಯಗಳಿಂದ ವಲಸೆ ಬಂದ ಕಾರ್ಮಿಕರಿಗೆ ಕ್ವಾರಂಟೈನ್ನಲ್ಲಿ ಊಟದ ವ್ಯವಸ್ಥೆ ಮಾಡಿ ಸೇವೆ ಸಲ್ಲಿಸಿದ್ದೇವೆ. ಏಪ್ರಿಲ್ ತಿಂಗಳಿನಿಂದ ಶಾಲೆ ಆರಂಭವಾಗುವವರೆಗೂ ವೇತನ ನೀಡಬೇಕು. ಎಲ್ಲಾ ನೌಕರರಿಗೆ ಎಲ್.ಐ.ಸಿ ಆಧಾರಿತ ಪೆನ್ಷನ್ ನೀಡಬೇಕೆಂದು ಒತ್ತಾಯಿಸಿದರು.