ಕುಷ್ಟಗಿ(ಕೊಪ್ಪಳ):ತಾಲೂಕಿನ ತಹಶೀಲ್ದಾರ ಎಂ. ಸಿದ್ದೇಶ ಅವರು, ಶಾಂತಿ ಸಭೆ ನಡೆಸಿ ರಂಜಾನ್ ಹಬ್ಬದ ಸಮಯದಲ್ಲಿ ಸರ್ಕಾರದ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಹಜ್ ಇಲಾಖೆಯ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ಮುಸ್ಲಿಂ ಬಾಂಧವರಿಗೆ ಹೇಳಿದರು.
ಜಾಲತಾಣಗಳ ಪ್ರಚೋದನಾತ್ಮಕ ಪೋಸ್ಟ್ಗೆ ಪ್ರತಿಕ್ರಿಯಿಸಬೇಡಿ: ಮುಸ್ಲಿಂ ಸಮುದಾಯಕ್ಕೆ ಸಲಹೆ
ತಹಶೀಲ್ದಾರ ಎಂ. ಸಿದ್ದೇಶ ಅವರು, ಶಾಂತಿ ಸಭೆ ನಡೆಸಿ ರಂಜಾನ್ ಹಬ್ಬದ ಸಮಯದಲ್ಲಿ ಸರ್ಕಾರದ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಹಜ್ ಇಲಾಖೆಯ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ಮುಸ್ಲಿಂ ಬಾಂಧವರಿಗೆ ಹೇಳಿದರು.
ತಾಲೂಕಿನ ಪೊಲೀಸ್ ಠಾಣೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಂತಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ತಹಶೀಲ್ದಾರ ಎಂ. ಸಿದ್ದೇಶ ಅವರು. ಗುರುವಾರದಿಂದ ಆರಂಭವಾಗುವ ರಂಜಾನ್ ಮಾಸಾಚರಣೆ ವೇಳೆ ಹಾಗೂ ರಂಜಾನ್ ಹಬ್ಬದ ಸಮಯದಲ್ಲಿ ಮುಸ್ಲಿಂ ಬಾಂಧವರು ಸರ್ಕಾರದ, ಅಲ್ಪ ಸಂಖ್ಯಾತರ ಕಲ್ಯಾಣ ಹಾಗೂ ಹಜ್ ಇಲಾಖೆಯ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ಹೇಳಿದರು.
ಇನ್ನೂ, ಸಿಪಿಐ ಚಂದ್ರಶೇಖರ ಜಿ. ಅವರು, ಲಾಕ್ಡೌನ್ ಸಂಧರ್ಭದಲ್ಲಿ ಮನೆಯಲ್ಲಿದ್ದು ಹಬ್ಬ ಆಚರಿಸಿರಿ ಎಂದು ಕರೆ ನೀಡಿದರು. ಇದೇ ವೇಳೆ ಮಾತನಾಡಿದ ಪಿಎಸ್ಐ ಚಿತ್ತರಂಜನ್ ನಾಯಕ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಪ್ರಚೋದನಾತ್ಮಕ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ. ಬದಲಿಗೆ ಅವುಗಳನ್ನು ಪೊಲೀಸರ ಗಮನಕ್ಕೆ ತರಬೇಕು ಎಂದು ಸೂಚಿಸಿದರು.