ಕೊಪ್ಪಳ: ಹೊಸ ಬಸ್ ಪಾಸ್ ಇಲ್ಲದ ಕಾರಣ ವಿದ್ಯಾರ್ಥಿಗಳನ್ನು ಬಸ್ನಲ್ಲಿ ಹತ್ತಿಸಿಕೊಳ್ಳಲು ಹಿಂದೇಟು ಹಾಕಿದ ಕಂಡಕ್ಟರ್ ವಿದ್ಯಾರ್ಥಿಗಳನ್ನು ಬಿಟ್ಟು ಹೋದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಡಿಕೇರಿ ಗ್ರಾಮದಲ್ಲಿ ನಡೆದಿದೆ.
ವಿದ್ಯಾರ್ಥಿಗಳನ್ನು ಬಸ್ನಲ್ಲಿ ಹತ್ತಿಸಿಕೊಳ್ಳಲು ಹಿಂದೇಟು: ಪೇಚಾಟಕ್ಕೆ ಸಿಲುಕಿದ ಸ್ಟುಡೆಂಟ್ಸ್! - old bus pass
ಹೊಸ ಬಸ್ ಪಾಸ್ ಇಲ್ಲದ ಕಾರಣ ವಿದ್ಯಾರ್ಥಿಗಳನ್ನು ಬಸ್ನಲ್ಲಿ ಹತ್ತಿಸಿಕೊಂಡಿಲ್ಲ. ಇದರಿಂದಾಗಿ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗುತ್ತಿದೆ ಎಂದು ಕುಷ್ಟಗಿ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
![ವಿದ್ಯಾರ್ಥಿಗಳನ್ನು ಬಸ್ನಲ್ಲಿ ಹತ್ತಿಸಿಕೊಳ್ಳಲು ಹಿಂದೇಟು: ಪೇಚಾಟಕ್ಕೆ ಸಿಲುಕಿದ ಸ್ಟುಡೆಂಟ್ಸ್! kushtagi students problem](https://etvbharatimages.akamaized.net/etvbharat/prod-images/768-512-13205783-thumbnail-3x2-xnfbmbn.jpg)
ಕುಷ್ಟಗಿ ವಿದ್ಯಾರ್ಥಿಗಳ ಸಮಸ್ಯೆ
ಕುಷ್ಟಗಿ ವಿದ್ಯಾರ್ಥಿಗಳ ಸಮಸ್ಯೆ
ಕುಷ್ಟಗಿ ತಾಲೂಕಿನ ಮಡಿಕೇರಿ ಗ್ರಾಮದಿಂದ ಹನುಮಸಾಗರಕ್ಕೆ ಹೋಗಬೇಕಿದ್ದ ವಿದ್ಯಾರ್ಥಿಗಳ ಬಳಿ ಹಳೆ ಪಾಸ್ ಇದೆ ಎಂಬ ಕಾರಣಕ್ಕೆ ಅವರನ್ನು ಬಸ್ನಲ್ಲಿ ಹತ್ತಿಸಿಕೊಳ್ಳಲು ಕಂಡಕ್ಟರ್ ಹಿಂದೇಟು ಹಾಕಿದ್ದಾನೆ. ಹೊಸ ಪಾಸ್ಗೆ ಅರ್ಜಿ ಹಾಕಿದರೂ ನಮಗೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಪಾಸ್ ನೀಡಿಲ್ಲ. ನಮ್ಮನ್ನು ಅರ್ಧ ದಾರಿಯಲ್ಲಿಯೇ ಬಸ್ನಿಂದ ಇಳಿಸುತ್ತಾರೆ. ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ:ಹಾಸನ: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ: ಐವರು ಅಂದರ್ - ಇಬ್ಬರು ಮಹಿಳೆಯರ ರಕ್ಷಣೆ