ಕರ್ನಾಟಕ

karnataka

ETV Bharat / state

ಕುಷ್ಟಗಿ: ಹಲವು ಪೊಲೀಸರು ಹಾಸ್ಟೆಲ್​​ನಲ್ಲಿ ಹೋಮ್ ಕ್ವಾರಂಟೈನ್ - primary contact police

ಕುಷ್ಟಗಿಯ ಸಿಪಿಐ ಕಚೇರಿಯ ಇಬ್ಬರು ಪೊಲೀಸರಲ್ಲಿ ಸೋಂಕು ಕಂಡುಬಂದ ಹಿನ್ನೆಲೆ, ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಪೊಲೀಸರು ಎಸ್ಸಿ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಸೆಲ್ಫ್ ಕ್ವಾರಂಟೈನ್ ಆಗಲು ನಿರ್ಧರಿಸಿದ್ದಾರೆ.

ಕುಷ್ಟಗಿ ಸಿಪಿಐ ಕಚೇರಿಯ ಇಬ್ಬರು ಪೊಲೀಸರಲ್ಲಿ ಕೊರೊನಾ
ಕುಷ್ಟಗಿ ಸಿಪಿಐ ಕಚೇರಿಯ ಇಬ್ಬರು ಪೊಲೀಸರಲ್ಲಿ ಕೊರೊನಾ

By

Published : Jul 13, 2020, 6:36 AM IST

ಕುಷ್ಟಗಿ (ಕೊಪ್ಪಳ):ಕುಷ್ಟಗಿ ಸಿಪಿಐ ಕಚೇರಿಯ ಇಬ್ಬರು ಪೊಲೀಸರಲ್ಲಿ ಕೊರೊನಾ ಸೋಂಕು ಕಂಡುಬಂದ ಹಿನ್ನೆಲೆ 9 ಜನ ಪ್ರಾಥಮಿಕ ಸಂಪರ್ಕಿತರು ಸ್ವಯಂ ಪ್ರೇರಿತರಾಗಿ ಇಲ್ಲಿನ ಎಸ್ಸಿ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಸೆಲ್ಫ್ ಕ್ವಾರಂಟೈನ್ ಆಗಲು ನಿರ್ಧರಿಸಿದ್ದಾರೆ.

ಪ್ರಾಥಮಿಕ ಸಂಪರ್ಕಿತ ಪೊಲೀಸರು ಹಾಸ್ಟೆಲ್​​ನಲ್ಲಿ ಹೋಮ್ ಕ್ವಾರಂಟೈನ್

ಸೋಂಕಿತ ಪೊಲೀಸ್ ಸಿಬ್ಬಂದಿ ವಸತಿ ಗೃಹದಲ್ಲಿ ವಾಸವಾಗಿದ್ದರು. ಪ್ರಾಥಮಿಕ ಸಂಪರ್ಕಿತರು ವಸತಿ ಗೃಹದಲ್ಲಿದ್ದರೇ ತೊಂದರೆ ಎಂದು ತಾವೇ ಪ್ರತ್ಯೇಕವಾಗಿ ವಸತಿ ನಿಲಯದಲ್ಲಿ ಹೋಮ್ ಕ್ವಾರಂಟೈನ್ ಆಗಲು ನಿರ್ಧರಿಸಿದ್ದಾರೆ.

ಈ ಹಿನ್ನೆಲೆ ಪೊಲೀಸರ ಮನವಿಗೆ ಸ್ಪಂದಿಸಿದ ತಹಶೀಲ್ದಾರ್​​ ಎಂ. ಸಿದ್ದೇಶ ಅವರು ವಸತಿ ನಿಲಯದಲ್ಲಿರಲು ಅವಕಾಶ ಕಲ್ಪಿಸಲು ಕ್ರಮ ಕೈಗೊಂಡಿರುವುದು ಗೊತ್ತಾಗಿದೆ.

ABOUT THE AUTHOR

...view details