ಕರ್ನಾಟಕ

karnataka

ETV Bharat / state

ಬಳಕೆಯಾದ ಪಿಪಿಇ ಕಿಟ್ ಎಲ್ಲೆಂದರಲ್ಲಿ ಬಿಸಾಡಿದ ಆರೋಗ್ಯ ಸಿಬ್ಬಂದಿ: ಸ್ಥಳೀಯರಿಂದ ಆಕ್ರೋಶ - ಕುಷ್ಟಗಿ ತಾಲೂಕು ಸರ್ಕಾರಿ ಆಸ್ಪತ್ರೆ

ಆಸ್ಪತ್ರೆಯಲ್ಲಿ ಕೊರೊನಾ ಶಂಕಿತರ ಗಂಟಲು ದ್ರವ ಪಡೆಯಲು ಧರಿಸುವ ಪಿಪಿಇ ಕಿಟ್​​ಗಳನ್ನು ಬಳಸಿದ ನಂತರ ಎಲ್ಲೆಂದರಲ್ಲಿ ಬಿಸಾಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

Kushtagi taluk hospital problem
Kushtagi taluk hospital problem

By

Published : Jul 7, 2020, 10:17 PM IST

ಕುಷ್ಟಗಿ (ಕೊಪ್ಪಳ): ಕುಷ್ಟಗಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಶಂಕಿತರ ಗಂಟಲು ದ್ರವ ಪಡೆಯಲು ಧರಿಸುವ ಪಿಪಿಇ ಕಿಟ್​​ ಬಳಕೆ ನಂತರ ಎಲ್ಲೆಂದರಲ್ಲಿ ಬಿಸಾಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಗಂಟಲು ದ್ರವ ಮಾದರಿ ಸಂಗ್ರಹಿಸುವ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಸುರಕ್ಷತೆಯ ದೃಷ್ಟಿಯಿಂದ ಪಿಪಿಇ ಕಿಟ್ ಧರಿಸುತ್ತಾರೆ. ಬಳಸಿದ ನಂತರ ಪ್ರತ್ಯೇಕ ಕವರ್​ನಲ್ಲಿ ಅದನ್ನು ಒಂದೆಡೆ ಸಂಗ್ರಹಿಸಿಡಬೇಕು. ನಂತರ ವಾರಕ್ಕೊಮ್ಮೆ ಬರುವ ಶರಣು ಅಸೋಸಿಯೇಟ್ಸ್ ವಾಹನದಲ್ಲಿ ಈ ತ್ಯಾಜ್ಯ ಇಲ್ಲಿಂದ ವಿಲೇವಾರಿಯಾಗುತ್ತದೆ.

ಆದರೆ ಇಲ್ಲಿ ಬಳಸಿದ ಪಿಪಿಇ ಕಿಟ್​​ಗಳು ಕ್ಯಾಂಟೀನ್ ಹಿಂದೆಯೇ ಬಿಸಾಡಿದ್ದಾರೆ. ಇದನ್ನು ಪ್ರಶ್ನಿಸಿದರೆ ನಾವೇನು ಮಾಡಲು ಸಾಧ್ಯ ಎನ್ನುವ ಉತ್ತರ ಕೇಳಿ ಬರುತ್ತಿದೆ ಎನ್ನಲಾಗಿದೆ. ಈ ಕುರಿತು ಆಸ್ಪತ್ರೆಯ ಮುಖ್ಯಸ್ಥ ಡಾ. ಚಂದ್ರಕಾಂತ ಮಂತ್ರಿ ಅವರನ್ನು ಕೇಳಿದಾಗ, ತಾವು ರಜೆಯಲ್ಲಿರುವುದಾಗಿ ಎಂದಷ್ಟೇ ಪ್ರತಿಕ್ರಿಯಿಸಿದ್ದಾರೆ.

ABOUT THE AUTHOR

...view details