ಕರ್ನಾಟಕ

karnataka

ETV Bharat / state

ಕುಷ್ಟಗಿ ಪುರಸಭೆ ಉಪ ಚುನಾವಣೆ ಫಲಿತಾಂಶ: ಅಕ್ಕಮಹಾದೇವಿಗೆ ಜಯ.. ಒಂಟೆ ಮೇಲೆ ಕುಳಿತು ಬಿಜೆಪಿಗರ ಸಂಭ್ರಮ - koppal news

ಸೆ.3ರಂದು ಕುಷ್ಟಗಿ ಪುರಸಭೆ 16ನೇ ವಾರ್ಡ್​ಗೆ ನಡೆದ ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಅಭ್ಯರ್ಥಿ ಅಕ್ಕಮಹಾದೇವಿ ಬಸವರಾಜ ನಾಯಕವಾಡಿ ಅವರು 166 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಅಕ್ಕಮಹಾದೇವಿ
ಅಕ್ಕಮಹಾದೇವಿ

By

Published : Sep 6, 2021, 12:31 PM IST

ಕುಷ್ಟಗಿ (ಕೊಪ್ಪಳ): ಕುಷ್ಟಗಿ ಪುರಸಭೆ 16ನೇ ವಾರ್ಡ್​ಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಕ್ಕಮಹಾದೇವಿ ಬಸವರಾಜ ನಾಯಕವಾಡಿ ಅವರು 166 ಮತಗಳ ಅಂತರದಿಂದ ಭರ್ಜರಿ ಜಯ ಗಳಿಸಿದ್ದಾರೆ.

ಇಂದು ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ನಡೆದ ಮತ ಎಣಿಕೆಯಲ್ಲಿ ಅಕ್ಕಮಹಾದೇವಿ ಅವರಿಗೆ 438 ಮತಗಳು ಮತ್ತು ಇವರ ಪ್ರತಿಸ್ಪರ್ಧಿ ಪಾರ್ವತಿ ನಾಗರಾಜ್ ಬಂಡಿ ಅವರಿಗೆ 272 ಮತಗಳು ಪ್ರಾಪ್ತವಾದವು. 5 ನೋಟಾ ಮತಗಳು ಬಿದ್ದಿವೆ. ಸದರಿ ಉಪ ಚುನಾವಣೆಯಲ್ಲಿ 166 ಮತಗಳ ಅಂತರದಿಂದ 16ನೇ ವಾರ್ಡ್​ ನೂತನ ಸದಸ್ಯೆಯಾಗಿ ಅಕ್ಕಮಹಾದೇವಿ ಅವರು ಆಯ್ಕೆಯಾಗಿದ್ದಾರೆ.

ಒಂಟೆ ಮೇಲೆ ಬಿಜೆಪಿ ಧ್ವಜ ಹಿಡಿದು ಕುಳಿತು ಬಿಜೆಪಿಗರ ಸಂಭ್ರಮ

ಇದನ್ನೂ ಓದಿ: ಮಹಾನಗರ ಪಾಲಿಕೆ ಸಮರ: ಬೆಳಗಾವಿ, ಹು-ಧಾ ಪಾಲಿಕೆಯಲ್ಲಿ ಕಮಲ ಕಿಲಕಿಲ..ಕಲಬುರಗಿಯಲ್ಲಿ ಕೈಗೆ ಮುನ್ನಡೆ

ಸೆ.3ರಂದು ನಡೆದ ಉಪ ಚುನಾವಣೆಯಲ್ಲಿ 16ನೇ ವಾರ್ಡ್​ನ ಒಟ್ಟು 948 ಮತದಾರರಲ್ಲಿ 715 ಜನ ಮತ ಚಲಾಯಿಸಿದ್ದರು. ಚುನಾವಣಾಧಿಕಾರಿಯಾಗಿ ಅಮರೇಶ ಹಾವಿನ್ ಕಾರ್ಯನಿರ್ವಹಿಸಿದ್ದಾರೆ. ಸತತ ಎರಡು ಬಾರಿ ಪಕ್ಷೇತರರಿಗೆ ಮಣೆ ಹಾಕಿದ್ದ 16ನೇ ವಾರ್ಡ್​ ಮತದಾರರು ಈ ಬಾರಿ ಬಿಜೆಪಿ ಕೈ ಹಿಡಿದಿದ್ದಾರೆ.

ಇಂದು ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ಬಿಜೆಪಿಯ ಜಿ.ಪಂ.ಸದಸ್ಯ ಕೆ.ಮಹೇಶ, ಪುರಸಭೆ ಅಧ್ಯಕ್ಷ ಗಂಗಾಧರ ಹಿರೇಮಠ, ಯುವ ಮೋರ್ಚಾ ಅಧ್ಯಕ್ಷ ಉಮೇಶ ಯಾದವ್​, ಪ್ರಭುಶಂಕರಗೌಡ ಪಾಟೀಲ ಅವರು ಒಂಟೆ ಮೇಲೆ ಬಿಜೆಪಿ ಧ್ವಜ ಹಿಡಿದು ಕುಳಿತು ಸಂಭ್ರಮಿಸಿದ್ದಾರೆ.

ABOUT THE AUTHOR

...view details