ಕುಷ್ಟಗಿ (ಕೊಪ್ಪಳ): ಬಿಜೆಪಿ ನೇತೃತ್ವದ ಸಮ್ಮಿಶ್ರ ಆಡಳಿತಕ್ಕೆ ಗಂಗಾಧರಸ್ವಾಮಿ ಹಿರೇಮಠ (ಜಿ.ಕೆ.) ಪುರಸಭೆ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದ್ದು, ಇಷ್ಟೂ ದಿನವಿದ್ದ ರಾಜಕೀಯ ತೆರೆಮರೆ ಆಟಕ್ಕೆ ಇದೀಗ ತೆರೆ ಬಿದ್ದಿದೆ.
ಕುಷ್ಟಗಿ ಪುರಸಭೆ ಚುನಾವಣೆ: ಕಾಂಗ್ರೆಸ್ ತೆಕ್ಕೆಗಿದ್ದ ಅದೃಷ್ಟ, ಕಮಲದ ಕಾಂಪೌಂಡ್ಗೆ! - ಅ.22ರಂದು ಪುರಸಭೆ ಚುನಾವಣೆ
ಒಗ್ಗಟ್ಟಿನ ಮಂತ್ರದೊಂದಿಗೆ ಪ್ರವಾಸಕ್ಕೆ ತೆರಳಿದ್ದ ಕಾಂಗ್ರೆಸ್ಸಿಗರು ತಮ್ಮ ಹೈಕಮಾಂಡ್ ಬಗ್ಗೆ ವಿಶ್ವಾಸ ಕಳೆದುಕೊಂಡ ಹಿನ್ನೆಲೆಯಲ್ಲಿ ಭಿನ್ನ ನಿಲುವಿನೊಂದಿಗೆ ವಾಪಸ್ಸಾಗಿದ್ದಾರೆ. 12 ಸದಸ್ಯ ಬಲದಲ್ಲಿ ಇಬ್ಬರು ಈಗಾಗಲೇ ತಮ್ಮ ಪಕ್ಷಕ್ಕೆ ಕೈ ಕೊಟ್ಟಿರುವುದು ಅಧಿಕಾರದ ಕನಸು ನುಚ್ಚು ನೂರಾಗಿದೆ. ಅಲ್ಲದೇ ಇನ್ನೂ ಮೂವರು ಕಾಂಗ್ರೆಸ್ ಸದಸ್ಯರು ಬಿಜೆಪಿ ಬೆಂಬಲಿಸಲಿರುವುದಾಗಿ ತಿಳಿದು ಬಂದಿದೆ.
ಅ.22ರಂದು ಪುರಸಭೆ ಅದ್ಯಕ್ಷ-ಉಪಾದ್ಯಕ್ಷ ಆಯ್ಕೆಗೆ ಚುನಾವಣೆ ನಿಗದಿಯಾಗುತ್ತಿದ್ದಂತೆ ಕಾಂಗ್ರೆಸ್ನ ಬಹುಮತದ ಅದೃಷ್ಟ ಬಿಜೆಪಿಗೆ ವರ್ಗಾಯಿಸಿದೆ. ಒಗ್ಗಟ್ಟಿನ ಮಂತ್ರದೊಂದಿಗೆ ಪ್ರವಾಸಕ್ಕೆ ತೆರಳಿದ್ದ ಕಾಂಗ್ರೆಸ್ಸಿಗರು ತಮ್ಮ ಹೈಕಮಾಂಡ್ ಬಗ್ಗೆ ವಿಶ್ವಾಸ ಕಳೆದುಕೊಂಡ ಹಿನ್ನೆಲೆಯಲ್ಲಿ ಭಿನ್ನ ನಿಲುವಿನೊಂದಿಗೆ ವಾಪಸ್ಸಾಗಿದ್ದಾರೆ. 12 ಸದಸ್ಯ ಬಲದಲ್ಲಿ ಇಬ್ಬರು ಈಗಾಗಲೇ ತಮ್ಮ ಪಕ್ಷಕ್ಕೆ ಕೈ ಕೊಟ್ಟಿರುವುದು ಅಧಿಕಾರದ ಕನಸು ನುಚ್ಚು ನೂರಾಗಿದೆ. ಅಲ್ಲದೇ ಇನ್ನೂ ಮೂವರು ಕಾಂಗ್ರೆಸ್ ಸದಸ್ಯರು ಬಿಜೆಪಿ ಬೆಂಬಲಿಸಲಿರುವುದಾಗಿ ತಿಳಿದು ಬಂದಿದೆ.
8 ಸದಸ್ಯ ಬಲದ ಬಿಜೆಪಿಗೆ ಮೂವರು ಪಕ್ಷೇತರ ಹಾಗೂ ಇಬ್ಬರು ಕಾಂಗ್ರೆಸ್ ಸದಸ್ಯರ ಬೆಂಬಲದೊಂದಿಗೆ 13 ಸದಸ್ಯರೊಂದಿಗೆ ಅಧಿಕಾರ ಬುನಾದಿ ಭದ್ರಪಡಿಸಿಕೊಂಡಿದೆ. ಅ. 22ರಂದು ಬಿಜೆಪಿ ಪುರಸಭೆ ಸದಸ್ಯ 21ನೇ ವಾರ್ಡ್ ಸದಸ್ಯ ಗಂಗಾಧರ ಸ್ವಾಮಿ ಹಿರೇಮಠ ನೂತನ ಅದ್ಯಕ್ಷರಾಗಲಿದ್ದು, ಉಪಾದ್ಯಕ್ಷ ಸ್ಥಾನ 16ನೇ ವಾರ್ಡ್ ಸದಸ್ಯೆ ರಾಜೇಶ್ವರಿ ಆಡೂರು ಅವರಿಗೆ ಸಿಗುವ ಸಾಧ್ಯತೆಗಳಿವೆ. ಇತ್ತ ಕಾಂಗ್ರೆಸ್ ಹೈಕಮಾಂಡ್ ಅಧ್ಯಕ್ಷರಾಗುವ ಅಭ್ಯರ್ಥಿಯನ್ನು ಪ್ರಕಟಿಸದೇ ನಿಗೂಢವಾಗಿಟ್ಟಿರುವುದು, ತಮ್ಮ ಸದಸ್ಯರ ಒಮ್ಮತಾಭಿಪ್ರಾಯ ಕೇಳದೆ ತಾವು ಹೇಳುವ ಸದಸ್ಯನನ್ನೇ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಂಬ ಅಂತಿಮ ಎನ್ನುವ ಬಿಗಿ ನಿಲುವಿಗೆ ಕೆಲ ಸದಸ್ಯರು ಹೈಕಮಾಂಡ್ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.