ಕರ್ನಾಟಕ

karnataka

ETV Bharat / state

ಕುಷ್ಟಗಿ ಪುರಸಭೆ ಅಧಿಕಾರ ಚುಕ್ಕಾಣಿ ಹಿಡಿಯಲು ಬಿಜೆಪಿ ಕಸರತ್ತು - election

ಕೊಪ್ಪಳ ಜಿಲ್ಲೆ ಕುಷ್ಟಗಿ ಪುರಸಭೆ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಹಾಗೂ ಕಾಂಗ್ರೆಸ್​ ಭಾರಿ ಕಸರತ್ತು ನಡೆಸುತ್ತಿವೆ.ಈ ಚುನಾವಣೆ ಹಾಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹಾಗೂ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್​ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

kushtagi muncipality election news
ಕುಷ್ಟಗಿ

By

Published : Oct 10, 2020, 12:09 PM IST

ಕುಷ್ಟಗಿ (ಕೊಪ್ಪಳ):ಕುಷ್ಟಗಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಗದ್ದುಗೆ ಏರಲು ಬಿಜೆಪಿ ಶತಾಯ ಗತಾಯ ಪ್ರಯತ್ನ ಮುಂದುವರಿಸಿದ್ದು, ಕಾಂಗ್ರೆಸ್ ಪಕ್ಷದ ನಿದ್ದೆಗೆಡಿಸಿದೆ.

ಒಟ್ಟು 23 ಸದಸ್ಯರಲ್ಲಿ 12 ಸದಸ್ಯ ಬಲವನ್ನು ಕುಗ್ಗಿಸಲು ಬಿಜೆಪಿ ಈಗಾಗಲೇ ಕಾರ್ಯಾಚರಣೆಗೆ ಇಳಿದಿದೆ. ಹೀಗಾಗಿ ತನ್ನ 8 ಸದಸ್ಯ ಬಲದೊಂದಿಗೆ ಇಬ್ಬರು ಪಕ್ಷೇತರ ಹಾಗೂ ಓರ್ವ ಅವಿರೋಧ ಅಯ್ಕೆಯಾದ ಸದಸ್ಯನ ಬೆಂಬಲದಿಂದ 11ಕ್ಕೆ ಹೆಚ್ಚಿಸಿಕೊಂಡಿದೆ. ಅಧಿಕಾರ ವಶಪಡಿಸಿಕೊಳ್ಳಲು ಇನ್ನೇನು ಒಬ್ಬ ಸದಸ್ಯನ ಬೆಂಬಲ ಅಗತ್ಯವಿದ್ದು, ಈಗಾಗಲೇ 3ನೇ ವಾರ್ಡ್​ ಕಾಂಗ್ರೆಸ್ ಸದಸ್ಯೆ ಗೀತಾ ಶರಣಪ್ಪ ಅವರಿಗೆ ಗಾಳ ಹಾಕಿದೆ.

ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲು 3ನೇ ವಾರ್ಡ್​​ ಸದಸ್ಯೆಯ ನಡೆ ನಿರ್ಣಾಯಕ ಘಟ್ಟ ತಲುಪಿದೆ. ಕಾಂಗ್ರೆಸ್ ಪಾಳಯಕ್ಕೆ ಈ ಬೆಳವಣಿಗೆ ಬಿಸಿ ತುಪ್ಪವಾಗಿದೆ. ಕುಷ್ಟಗಿ ಪುರಸಭೆ ಅಧ್ಯಕ್ಷ ಸ್ಥಾನ ಬಹುಮತವಿದ್ದಾಗ್ಯೂ ಈಗಿನ ಬೆಳವಣಿಗೆಯಿಂದ ಕಾಂಗ್ರೆಸ್​ಗೆ ಗೆಲುವು ಅಷ್ಟು ಸುಲಭವಲ್ಲ ಎನ್ನುವುದು ಮನವರಿಕೆಯಾಗಿದೆ. ಪುರಸಭೆ ಅಧಿಕಾರಕ್ಕಾಗಿ ಮುಂದುವರಿದ ಕಾಂಗ್ರೆಸ್, ಬಿಜೆಪಿಯ ಈ ಕಸರತ್ತು ಹಾಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹಾಗೂ ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿರುವ ದೊಡ್ಡನಗೌಡ ಪಾಟೀಲ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿ ತಿರುವು ಪಡೆದುಕೊಂಡಿದೆ.

ABOUT THE AUTHOR

...view details