ಕುಷ್ಟಗಿ: ಮುಖ್ಯ ಶಿಕ್ಷಕಿಯೊಬ್ಬರ ಕನ್ನಡ ಕೈ ಬರಹದ ರಜೆ ಚೀಟಿಯನ್ನು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರು ಓದಿ ಸ್ವತಃ ಮುಜುಗುರಕ್ಕೀಡಾದ ಪ್ರಸಂಗ ತಾಲೂಕಿನ ಹಾಗಲದಾಳ ಗ್ರಾಮದಲ್ಲಿ ನಡೆದಿದೆ.
ಕುಷ್ಟಗಿ: ಮುಖ್ಯ ಶಿಕ್ಷಕಿಯ ಕನ್ನಡ ರಜೆ ಚೀಟಿ ಓದಿ ಮುಜುಗರಕ್ಕೀಡಾದ ಶಾಸಕ - ML A Amaregowda Patil Bayapur
ಸೋಮವಾರ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರು, ಹಾಗಲದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ್ದರು. ಆ ವೇಳೆ, ಮುಖ್ಯಶಿಕ್ಷಕಿ ರಜೆಯಲ್ಲಿರುವುದು ಗೊತ್ತಾಗಿ, ಕೈ ಬರಹದ ರಜೆ ಚೀಟಿ ಗಮನಿಸಿದರು.
ಸೋಮವಾರ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರು, ಅಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ್ದರು. ಆ ವೇಳೆ, ಮುಖ್ಯ ಶಿಕ್ಷಕಿ ರಜೆಯಲ್ಲಿರುವುದು ಗೊತ್ತಾಗಿ, ಕೈ ಬರಹದ ರಜೆ ಚೀಟಿ ಗಮನಿಸಿದರು. ಅದರಲ್ಲಿ ಮುಖ್ಯ ಶಿಕ್ಷಕಿ ಎಂ.ಎಚ್.ರೇಣವ್ವ ಅವರು ರಜೆ ಚೀಟಿಯಲ್ಲಿ ಬ್ಯಾನರ್ ತರಲು ಕುಷ್ಟಗಿಗೆ ಹೋಗುವುದಾಗಿ ಬರೆಯದೇ ಕುಷ್ಟಗಿಗೆ ತರಲು ಬ್ಯಾನರ್ ಹೋಗಿರುತ್ತೇನೆ ಎಂದು ಬರೆದಿರುವುದನ್ನು ಕಂಡು ಅಚ್ಚರಿಗೊಳಗಾದ ಶಾಸಕರು, ಗ್ರಾಮಸ್ಥರ ಸಮಕ್ಷಮದಲ್ಲಿ ಗ್ರಾಮದ ಯುವಕನಿಂದ ಓದಿಸಿದರು. ನಂತರ ಮುಖ್ಯ ಶಿಕ್ಷಕಿ ಹಾಗೂ ಸಹ ಶಿಕ್ಷಕಿಯಿಂದ ಪುನಃ ಓದಿಸಿದರಲ್ಲದೇ ವಾಕ್ಯ ರಚನೆ ಲೋಪ ಹಾಗೂ ಕನ್ನಡ ಶಬ್ದಗಳನ್ನು ತಪ್ಪಾಗಿ ಬರೆದಿರುವುದರ ಬಗ್ಗೆ ತರಾಟೆಗೆ ತೆಗೆದುಕೊಂಡರು.
ನಂತರ ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಬಯ್ಯಾಪುರ ಅವರು, 7ನೇ ತರಗತಿವರೆಗೆ ಶಾಲೆಯಲ್ಲಿ 57 ಮಕ್ಕಳಿದ್ದು, ಇಬ್ಬರು ಶಿಕ್ಷಕರಿದ್ದಾರೆ. ಮುಖ್ಯಶಿಕ್ಷಕಿ ಕಾಟಾಚಾರಕ್ಕೆ ಕನ್ನಡದಲ್ಲಿ ರಜೆ ಚೀಟಿ ಬರೆದಿಟ್ಟಿರುವುದರ ಬಗ್ಗೆ ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ. ಇಂತಹವರು ಮಕ್ಕಳಿಗೆ ಏನು ಕಲಿಸಬಲ್ಲರು? ಅವರ ಜ್ಞಾನದ ಮಟ್ಟವನ್ನು ಖಾರವಾಗಿ ಪ್ರಶ್ನಿಸಿದ್ದಾರೆ.