ಕುಷ್ಟಗಿ: ಪಟ್ಟಣದ ಮುಖ್ಯ ರಸ್ತೆ ಬಸವೇಶ್ವರ ವೃತ್ತ ದಿಂದ ಮಾರುತಿ ವೃತ್ತದವರೆಗಿನ ದ್ವಿಪಥ ರಸ್ತೆಯಲ್ಲಿ, ಸಾಲು ಸಾಲು ಗುಂಡಿಗಳ ದರ್ಶನವಾಗಿದ್ದರೂ ದುರಸ್ತಿ ಕಾರ್ಯ ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಅವ್ಯವಸ್ಥೆ ಆಗರವಾದ ಕುಷ್ಟಗಿ ಮುಖ್ಯ ರಸ್ತೆ - ಬಸವೇಶ್ವರ ವೃತ್ತ ದಿಂದ ಮಾರುತಿ ವೃತ್ತ
ರಸ್ತೆಯ ತುಂಬೆಲ್ಲ ಗುಂಡಿಗಳಾಗಿರುವುದು ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯವೇ ಅವ್ಯವಸ್ಥೆಗೆ ಕಾರಣವಾಗಿದೆ. ಮಳೆಯಾದಾಗ ನೀರು ಗುಂಡಿಗಳಲ್ಲಿ ತುಂಬಿಕೊಳ್ಳುತ್ತಿದ್ದು, ಸವಾರರಿಗೆ ಇದರಲ್ಲಿ ಸಂಚರಿಸುವುದು ದುಸ್ತರವೆನಿಸಿದೆ.
![ಅವ್ಯವಸ್ಥೆ ಆಗರವಾದ ಕುಷ್ಟಗಿ ಮುಖ್ಯ ರಸ್ತೆ kushtagi-main-road-mess-problem-issue-news](https://etvbharatimages.akamaized.net/etvbharat/prod-images/768-512-9136993-467-9136993-1602416801063.jpg)
ಅವ್ಯವಸ್ಥೆ ಆಗರವಾದ ಕುಷ್ಟಗಿ ಮುಖ್ಯ ರಸ್ತೆ, ಅಧಿಕಾರಿ-ಜನಪ್ರತಿನಿಧಿಗಳ ವಿರುದ್ಧ ಸ್ಥಳೀಯರ ಅಸಮಾಧಾನ..
ಅವ್ಯವಸ್ಥೆ ಆಗರವಾದ ಕುಷ್ಟಗಿ ಮುಖ್ಯ ರಸ್ತೆ, ಅಧಿಕಾರಿ-ಜನಪ್ರತಿನಿಧಿಗಳ ವಿರುದ್ಧ ಸ್ಥಳೀಯರ ಅಸಮಾಧಾನ..
ರಸ್ತೆಯ ತುಂಬೆಲ್ಲ ಗುಂಡಿಗಳಾಗಿರುವುದು ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯವೇ ಅವ್ಯವಸ್ಥೆಗೆ ಕಾರಣವಾಗಿದೆ. ಮಳೆಯಾದಾಗ ನೀರು ಗುಂಡಿಗಳಲ್ಲಿ ತುಂಬಿಕೊಳ್ಳುತ್ತಿದ್ದು, ಸವಾರರಿಗೆ ಇದರಲ್ಲಿ ಸಂಚರಿಸುವುದು ದುಸ್ತರವೆನಿಸಿದೆ. ಈ ಗುಂಡಿಗಳಿಗೆ ಮಣ್ಣು ಹಾಕುತ್ತಿದ್ದು, ಡಾಂಬರ್ ಹಾಕಿ ಸರಿಪಡಿಸುವ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.