ಕರ್ನಾಟಕ

karnataka

ETV Bharat / state

ದುಂಡಾಣು ಅಂಗಮಾರಿಗೆ ಬ್ರೇಕ್​: ದಾಳಿಂಬೆ ಉತ್ತಮ ಫಸಲು ತೆಗೆದ ಕುಷ್ಟಗಿಯ ಮಾದರಿ ರೈತ - ದಾಳಿಂಬೆ ಬೆಳೆಗೆ ದುಂಡಾಣು ಅಂಗಮಾರಿ ಕಾಯಿಲೆ

ದಾಳಿಂಬೆ ಗಿಡವನ್ನು ಬೆಂಬಿಡದೇ ಕಾಡುವ ದುಂಡಾಣು ಅಂಗಮಾರಿ ರೋಗವನ್ನು ನಿಯಂತ್ರಣಕ್ಕೆ ತಂದು ಕುಷ್ಟಗಿಯ ರೈತರೊಬ್ಬರು ದಾಳಿಂಬೆಯಲ್ಲಿ ಉತ್ತಮ ಇಳುವರಿ ಕಂಡಿದ್ದಾರೆ.

ramesh konsagr got profit by prevent bacterial blight in pomegranates
ದಾಳಿಂಬೆಗೆ ದುಂಡಾಣು ಅಂಗಮಾರಿ ರೋಗ

By

Published : Jul 17, 2021, 8:17 AM IST

ಕುಷ್ಟಗಿ(ಕೊಪ್ಪಳ):ದಾಳಿಂಬೆ ರೈತನಿಗೆ ಉತ್ತಮ ಲಾಭ ತರುವ ಬೆಳೆ. ಆದರೆ ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆದ ದಾಳಿಂಬೆಗೆ ದುಂಡಾಣುಅಂಗಮಾರಿ ರೋಗ ದಾಳಿ ಮಾಡಿತ್ತು. ಹೀಗಾಗಿ ಈ ರೋಗವನ್ನು ಕಾಲ ಕಾಲಕ್ಕೆ‌ ಔಷಧ ಕ್ರಮಗಳಿಂದ ನಿಯಂತ್ರಿಸಿಕೊಂಡು ಈ ಬೆಳೆ ಬೆಳೆಯುವುದು ರೈತರಿಗೆ ಸವಾಲಿನ ಕೆಲಸ. ಆದರೆ ಕುಷ್ಟಗಿಯ ರೈತ ರಮೇಶ ಕೊನಸಾಗರ ಅವರು ದುಂಡಾಣು ಅಂಗಮಾರಿ ನಿಯಂತ್ರಿಸಿಕೊಂಡು ಈ ಬಾರಿ ಭರ್ಜರಿ ದಾಳಿಂಬೆ ಬೆಳೆದಿದ್ದಾರೆ. ತಾಲೂಕಿನ ನಿಡಶೇಸಿ ಸೀಮಾದಲ್ಲಿರುವ ತಮ್ಮ 13 ಎಕರೆ ಜಮೀನಿನಲ್ಲಿ ಒಟ್ಟು 9 ಎಕರೆ ದಾಳಿಂಬೆ ನಾಟಿ‌ ಮಾಡಿದ್ದು, ಸದ್ಯ 4 ಎಕರೆ ಕಟಾವಿನ ಹಂತದಲ್ಲಿದೆ.

ದುಂಡಾಣು ಅಂಗಮಾರಿ ನಿಯಂತ್ರಿಸಿ ಉತ್ತಮ ಫಸಲು ತೆಗೆದ ರೈತ

ಕಳೆದ 2019 ರ ಜೂನ್ ತಿಂಗಳಿನಲ್ಲಿ ಗುಜರಾತ್ ರಾಜ್ಯದ ಕೇಡಲ್​​​ನಿಂದ ಪ್ರತಿ ಸಸಿಗೆ 37 ರೂ. ನಂತೆ ಖರೀದಿಸಿ 4 ಎಕರೆ ಪ್ರದೇಶದಲ್ಲಿ 1500 ಗಿಡಗಳನ್ನು ನಾಟಿ ಮಾಡಿದ್ದಾರೆ. ಆರಂಭದಿಂದಲೂ ಹಂತ ಹಂತವಾಗಿ ನಿರ್ವಹಣೆ ವೆಚ್ಚ ಸೇರಿ 6ಲಕ್ಷ ರೂ. ಖರ್ಚಾಗಿದೆ.

2020ರಲ್ಲಿ ಮೊದಲ ಪ್ರಾಯೋಗಿಕ ಕಟಾವಿಗೆ 7 ಟನ್ ಇಳುವರಿ ಬಂದಿತ್ತು. ಆಗ ಪ್ರತಿ ಕೆಜಿಗೆ 90 ರಿಂದ 100 ರೂ.ವರೆಗೆ ಮಾರಾಟ ಮಾಡಿ 6 ಲಕ್ಷ ರೂ. ಆದಾಯ ಗಳಿಸಿದ್ರು ರಮೇಶ. ಬೆಂಗಳೂರು ಇತರೆಡೆಗಳಿಂದ ಪ್ರತಿ ಕೆಜಿಗೆ 80 ರೂ. ನಿಂದ 91 ರೂ. ಖರೀದಿಸುವುದಾಗಿ ಡಿಮ್ಯಾಂಡ್ ಬಂದಿದ್ದಾಗಿ ರಮೇಶ ಕೊನಸಾಗರ 'ಈಟಿವಿ ಭಾರತ'ಕ್ಕೆ ತಿಳಿಸಿದರು.

ಈ ಬಾರಿಯೂ ದುಂಡಾಣು ಅಂಗಮಾರಿ ರೋಗ ನಿಯಂತ್ರಣಕ್ಕೆ ತಂದೆ ಹಿನ್ನೆಲೆ ಪ್ರತಿ ಗಿಡ ಹೊರಲಾರದಂತಹ ಇಳುವರಿ ಕಾಣುತ್ತಿದೆ. ಗಿಡಗಳಿಗೆ ಭಾರ ತಡೆಯಲು ಕವಲು ಕಟ್ಟಿಗೆ ಸಹಾಯದಿಂದ ತಂತಿಗೆ ಎಳೆದು ಕಟ್ಟಿದ್ದರೂ, ಸಹ ಗಿಡಗಳು ಹಣ್ಣಿನ ಬಾರಕ್ಕೆ ಜೋತು ಬಿದ್ದಿವೆ.

ಈ ಬೆಳೆ ಬೆಳೆಯಲು ಖರ್ಚು ಮುಖ್ಯವಾಗುವುದಿಲ್ಲ, ಕಾಲಕಾಲಕ್ಕೆ ಔಷಧೋಪಚಾರಗಳಿಂದ ಈ ಬೆಳೆ ಬೆಳೆಯುವುದು ಮುಖ್ಯ. ಹಿರಿಯ ರೈತರಾದ ಜಗನ್ನಾಥ ಗೋತಗಿ, ಕುಂಬಾರ, ಶಂಕರ್ ಮೊದಲಾದವರ ಮಾರ್ಗದರ್ಶನದಲ್ಲಿ ಈ ಬೆಳೆ ಬೆಳೆದಿದ್ದು, ಈ ಬಾರಿ ಸರಾಸರಿ 20 ಟನ್ ಇಳುವರಿ ನಿರೀಕ್ಷೆಯಲ್ಲಿದ್ದಾರೆ ರೈತ ರಮೇಶ್​ ಕೊನಸಾಗರ.

ABOUT THE AUTHOR

...view details