ಕುಷ್ಟಗಿ (ಕೊಪ್ಪಳ): ಕುಷ್ಟಗಿಯ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಹೆಸರಿಗೆ ಮಾತ್ರ ವಿದ್ಯಾ ಮಂದಿರ. ಆದರೆ, ರಾತ್ರಿಯಾಗುತ್ತಿದ್ದಂತೆ ಕಾಲೇಜು ಆವರಣವು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗುತ್ತದೆ.
ಈ ಕಾಲೇಜಿನ ಸುತ್ತಲೂ ಗೋಡೆಯಿದ್ದರೂ ಕಿಡಿಗೇಡಿಗಳು ಗೋಡೆ ಜಿಗಿದು ಬಹಿರ್ದಸೆ ಮಾಡುತ್ತಿದ್ದಾರಂತೆ. ಅಷ್ಟೇ ಅಲ್ಲದೆ, ಸಂಜೆಯಾಗುತ್ತಿದ್ದಂತೆ ವ್ಯಸನಿಗಳು ಮದ್ಯಪಾನ ಮಾಡಲು, ಸಿಗರೇಟ್ ಸೇದಲು ಇದೇ ಕಾಲೇಜಿನ ಆವರಣಕ್ಕೆ ಬರುತ್ತಾರೆ. ಇನ್ನು ಲಾಕ್ಡೌನ್ ಅವಧಿಯಲ್ಲಿ ಇದರ ಹಾವಳಿ ಮಿತಿ ಮೀರಿದೆ. ಈ ಕಾಲೇಜಿನ ಹೊಸ ಕಟ್ಟಡದಲ್ಲಿ ಮಾಂಸಾಹಾರ ಊಟ ತಂದು ಎಸೆದುಹೋಗುತ್ತಿದ್ದಾರೆ ಎಂದು ಇಲ್ಲಿನ ಜನರು ಆರೋಪಿಸಿದ್ದಾರೆ.