ಕುಷ್ಟಗಿ (ಕೊಪ್ಪಳ):ಮಾದಕ ದ್ರವ್ಯ ಸೇವನೆಯಿಂದ ಸಮಾಜದ ಮೇಲಾಗುತ್ತಿರುವ ದುಷ್ಪರಿಣಾಮದ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾ ಆಯೋಜಿಸಿದ, ಬೀದಿ ನಾಟಕ ಪ್ರದರ್ಶನಕ್ಕೆ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಟಿ. ಮಂಜುನಾಥ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಯಮನೂರಪ್ಪ ಚೌಡಕಿ ಹಲಗೆ ಬಾರಿಸುವ ಮೂಲಕ ಬುಧವಾರ ಚಾಲನೆ ನೀಡಿದರು.
ಕುಷ್ಟಗಿ: ಡ್ರಗ್ಸ್ ಕುರಿತು ಬೀದಿ ನಾಟಕದ ಮೂಲಕ ಜಾಗೃತಿ
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶರಣಪ್ಪ ವಡಿಗೇರಿ ನೇತೃತ್ವದ ಜನ ಜಾಗೃತಿ ಕಲಾ ತಂಡದಿಂದ ಡ್ರಗ್ಸ್ ಕುರಿತು ಕುಷ್ಟಗಿಯಲ್ಲಿ ಜಾಗೃತಿ ಮೂಡಿಸಲಾಯಿತು.
ಡ್ರಗ್ಸ್ ಕುರಿತು ಬೀದಿ ನಾಟಕದ ಮೂಲಕ ಜಾಗೃತಿ
ಈ ವೇಳೆ ಮಾತನಾಡಿದ ಅವರು, ಮಾದಕ ದ್ರವ್ಯ, ಡ್ರಗ್ಸ್ ಕೇವಲ ಸ್ಯಾಂಡಲ್ ವುಡ್ (ಚಂದನವನ)ಗೆ ಮಾತ್ರ ಸೀಮಿತವಾಗಿಲ್ಲ. ಇದು ಎಲ್ಲೆಡೆ ವ್ಯಾಪಿಸಿದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಇದರ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಲು ಪ್ರಭಾವಶಾಲಿ ಮಾಧ್ಯಮ ಬೀದಿ ನಾಟಕ. ಈ ತಂಡ ಜಿಲ್ಲೆಯಾದ್ಯಂತ ಹೋಬಳಿ ಹಾಗೂ ಜಿ.ಪಂ. ಕ್ಷೇತ್ರದಲ್ಲಿ ಪ್ರದರ್ಶನ ನೀಡಿ ಜಾಗೃತಿ ಮೂಡಿಸಲಿದೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶರಣಪ್ಪ ವಡಿಗೇರಿ ನೇತೃತ್ವದ ಜನ ಜಾಗೃತಿ ಕಲಾ ತಂಡದಿಂದ ಮಾದಕ ದ್ರವ್ಯ, ಡ್ರಗ್ಸ್ ಕುರಿತು ಜಾಗೃತಿ ಮೂಡಿಸಲಾಯಿತು.
Last Updated : Sep 17, 2020, 6:31 AM IST