ಕುಷ್ಟಗಿ (ಕೊಪ್ಪಳ) :ಕೋವಿಡ್ 2ನೇ ಅಲೆ ಭೀತಿ ಹಿನ್ನೆಲೆ ಕುಷ್ಟಗಿಯ ವಾರದ ಹಾಗೂ ದಿನದ ಸಂತೆಯನ್ನು ತಾತ್ಕಾಲಿಕವಾಗಿ ತಾಲೂಕು ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಹಶೀಲ್ದಾರ್ ಎಂ.ಸಿದ್ದೇಶ್ ತಿಳಿಸಿದರು.
ಈ ಕುರಿತು ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಜನಸಂದಣಿ ಪ್ರದೇಶವಾದ ಬನ್ನಿಕಟ್ಟೆ ಸಂತೆ ಮೈದಾನ ಇಕ್ಕಟ್ಟಾಗಿದೆ. ಬೇರೆಡೆಯಿಂದ ಜನ ವ್ಯವಹಾರಕ್ಕೆ ಬರುತ್ತಿದ್ದು, ಕೋವಿಡ್ ಬಹುಬೇಗನೆ ಹರಡುವ ಸಾಧ್ಯತೆಗಳಿವೆ. ಹಾಗಾಗಿ, ಪುರಸಭೆಯು ಮುನ್ನೆಚ್ಚರಿಕಾ ಕ್ರಮದಿಂದ ತಾಲೂಕು ಕ್ರೀಡಾಂಗಣದಲ್ಲಿ ಸಂತೆ ನಡೆಸಲು ತೀರ್ಮಾನಿಸಲಾಗಿದೆ.