ಕರ್ನಾಟಕ

karnataka

ETV Bharat / state

ಒತ್ತುವರಿ ತೆರವಿಗೆ ಅಧಿಕಾರಿಗಳ ಹಿಂದೇಟು... ಅರ್ಧಕ್ಕೆ ನಿಂತ ಚರಂಡಿ ಕಾಮಗಾರಿ

ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಹೊರವಲಯದ ವಾರ್ಡ್​ ನಂ.1ರ ವ್ಯಾಪ್ತಿಯ ಕೃಷ್ಣಗಿರಿ ಕಾಲೋನಿಯಲ್ಲಿ ರಾಜಕೀಯ ಪ್ರಭಾವಿಗಳ ಮನೆಯಿದ್ದು, ಒತ್ತುವರಿ ತೆರವಿಗೆ ಪುರಸಭೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಕೂಡಲೇ ಪೂರ್ಣಗೊಳಿಸುವಂತೆ ಚರಂಡಿ ನಿವಾಸಿಗಳು ಪುರಸಭೆಗೆ ದೂರು ಸಲ್ಲಿಸಿದ್ದಾರೆ.

Krishnagiri colony road works in half
ಒತ್ತುವರಿ ತೆರವಿಗೆ ಅಧಿಕಾರಗಳ ಹಿಂದೇಟು..ಅರ್ಧಕ್ಕೆ ನಿಂತ ಚರಂಡಿ ಕಾಮಗಾರಿ

By

Published : May 7, 2020, 11:03 AM IST

Updated : May 7, 2020, 11:16 AM IST

ಕೊಪ್ಪಳ:ಕುಷ್ಟಗಿ ಪಟ್ಟಣದ ಹೊರವಲಯದ ವಾರ್ಡ್​ ನಂ.1ರ ವ್ಯಾಪ್ತಿಯ ಕೃಷ್ಣಗಿರಿ ಕಾಲೋನಿಯಲ್ಲಿ ಚರಂಡಿ ಕೆಲಸ ಕಳೆದ ಕೆಲವು ತಿಂಗಳಿನಿಂದ ಅರ್ಧಕ್ಕೆ ನಿಂತಿದೆ.

ಒತ್ತುವರಿ ತೆರವಿಗೆ ಅಧಿಕಾರಗಳ ಹಿಂದೇಟು..ಅರ್ಧಕ್ಕೆ ನಿಂತ ಚರಂಡಿ ಕಾಮಗಾರಿ

ಈ ಕಾರಣದಿಂದ ಉದ್ದೇಶಿತ ಉದ್ಯಾನದಲ್ಲಿ ಚರಂಡಿ ನೀರು ಜಮೆಯಾಗಿ ವಿಪರೀತ ಸೊಳ್ಳೆಗಳು ಹುಟ್ಟಿಕೊಂಡಿದ್ದು, ಡೆಂಘೀ, ಚಿಕನ್ ಗುನ್ಯಾ, ಮಲೇರಿಯಾ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಕೃಷ್ಣಗಿರಿ ಕಾಲೋನಿಯಲ್ಲಿ ರಾಜಕೀಯ ಪ್ರಭಾವಿಗಳ ಮನೆಯಿದ್ದು,ಒತ್ತುವರಿ ತೆರವಿಗೆ ಪುರಸಭೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.

ಒತ್ತುವರಿ ತೆರವಿಗೆ ಅಧಿಕಾರಗಳ ಹಿಂದೇಟು..ಅರ್ಧಕ್ಕೆ ನಿಂತ ಚರಂಡಿ ಕಾಮಗಾರಿ

ಹೀಗಾಗಿ ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ನೀರೆಲ್ಲ ಉದ್ದೇಶಿತ ಉದ್ಯಾನದಲ್ಲಿ ಸೇರುತ್ತಿದೆ. ಹೀಗಾಗಿ ಅರ್ಧಕ್ಕೆ ನಿಂತಿರುವ ಚರಂಡಿ ಕಾಮಗಾರಿ ಪೂರ್ಣಗೊಳಿಸುವಂತೆ ಚರಂಡಿ ನಿವಾಸಿಗಳು ಪುರಸಭೆಗೆ ದೂರು ಸಲ್ಲಿಸಿದ್ದಾರೆ.

Last Updated : May 7, 2020, 11:16 AM IST

ABOUT THE AUTHOR

...view details