ಕುಷ್ಟಗಿ(ಕೊಪ್ಪಳ): ಆಲಮಟ್ಟಿ ಜಲಾಶಯದಿಂದ ಕುಷ್ಟಗಿ ಪಟ್ಟಣಕ್ಕೆ ನೀರು ಪೂರೈಸುವ ಮುಖ್ಯ ಕೊಳವೆ ಸೋರಿಕೆ ಇದ್ದರೂ, ದುರಸ್ಥಿಗೂ ಕ್ರಮವಹಿಸದ ಕುಷ್ಟಗಿ ಪುರಸಭೆ ಹಾಗೂ ಹುನಗುಂದ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳ ಚರಂಡಿ (KUWSB) ಮಂಡಳಿ ಸಿಬ್ಬಂದಿ, ಅಧಿಕಾರಿಗಳ ವಿರುದ್ಧ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಬೇಸರ ವ್ಯಕ್ತಪಡಿಸಿದರು.
ಕೃಷ್ಣಾ ನದಿ ಪೈಪ್ಲೈನ್ನಲ್ಲಿ ನೀರು ಸೋರಿಕೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಯ್ಯಾಪೂರ ಬೇಸರ - officers' neglect
ಕಳೆದ ನಾಲ್ಕೈದು ದಿನಗಳಿಂದ ಪಟ್ಟಣದ ಹೊರವಲಯದ ಕೃಷ್ಣ ನದಿ ನೀರು ಪೂರೈಸುವ ಪಂಪ್ಪಹೌಸ್ ಬಳಿ ಮುಖ್ಯ ಕೊಳವೆಯ ನೀರು ಸೋರಿ ಅಪಾರ ಪ್ರಮಾಣದಲ್ಲಿ ನಿರಂತರವಾಗಿ ನೀರು ಹಳ್ಳಕ್ಕೆ ಹರಿಯುತ್ತಿದೆ.
ಈ ಕುರಿತು ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿದ ಶಾಸಕ ಬಯ್ಯಾಪೂರ , ಈ ನೀರು ಪೂರೈಕೆಗಾಗಿ ಅಂದಾಜು 3 ಕೋಟಿ ರೂ. ವೆಚ್ಚ ಮಾಡಿ ಹೊಸ ಮೋಟಾರು, ವಿದ್ಯುತ್ ವ್ಯವಸ್ಥೆ ಮಾಡಿ ಮೇಲ್ದರ್ಜೆಗೆ ಏರಿಸಲು ಇತ್ಯಾದಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಆದರೂ ಅಧಿಕಾರಿಗಳಿಗೆ ಸಮರ್ಪಕ ನಿರ್ವಹಣೆ ಆಗುತ್ತಿಲ್ಲ ಎಂದರು.
ಹೆಚ್ಚುವರಿ ನೆಲಮಟ್ಟದ ಜಲಸಂಗ್ರಹಗಾರ ನಿರ್ಮಾಣಕ್ಕೆ ಜಮೀನು ಖರೀದಿಗೆ ಎರಡು ವರ್ಷ ಕಳೆದರೂ ಈ ಅಧಿಕಾರಿಗಳಿಂದ ಏನೂ ಸಾದ್ಯವಾಗಿಲ್ಲ. ನಾವೇ ಫೈಲ್ ಹಿಡಿದು ಕಚೇರಿಗೆ ಅಲೆಯುವುದು ಬಾಕಿ ಇದೆ ಎಂದು ಕುಷ್ಟಗಿ ಪುರಸಭೆ ಹಾಗೂ ಹುನಗುಂದ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸರ ವ್ಯಕ್ತಪಡಿಸಿದರು.