ಕರ್ನಾಟಕ

karnataka

ETV Bharat / state

ಕೇಂದ್ರದಿಂದ ಉನ್ನತ ಸಂಸ್ಥೆಗಳ ದುರುಪಯೋಗ : ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ - KPCC president Dhruvnarayana outrage against bjp

ಈ ಹಿಂದೆ ತಮಿಳುನಾಡಿನ ಹಾಲಿ ಸಿಎಂ ಸ್ಟಾಲಿನ್, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಯ ಬಂಧು-ಬಳಗದವರ ಮನೆ ಮೇಲೆ ದಾಳಿ ಮಾಡಿಸಿ ಹೆದರಿಸುವ ತಂತ್ರವನ್ನ ಕೇಂದ್ರ ಸರ್ಕಾರ ಮಾಡಿತ್ತು. ಕರ್ನಾಟಕದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಕಾಂಗ್ರೆಸ್ ಪಕ್ಷದ ಉನ್ನತ ನಾಯಕರ ಮನೆ ಮೇಲೆ ದಾಳಿ ಮಾಡಿಸಲಾಗುತ್ತಿದೆ..

kpcc-president-dhruvnarayana-outrage-against-central-govt
ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ

By

Published : Aug 10, 2021, 10:26 PM IST

ಗಂಗಾವತಿ :ಶಾಸಕ ಜಮೀರ್ ಅಹ್ಮದ್ ಮನೆಯ ಮೇಲೆ ಇಡಿಯಿಂದ ದಾಳಿ ಮಾಡಿಸುವ ಮೂಲಕ ಕೇಂದ್ರ ಸರ್ಕಾರ ಉನ್ನತ ಸಂಸ್ಥೆಗಳನ್ನು ತನ್ನ ವೈಯಕ್ತಿಕ ಉದ್ದೇಶಕ್ಕೆ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌ ಧ್ರುವನಾರಾಯಣ ಆರೋಪಿಸಿದರು.

ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಎಲ್ಲೆಲ್ಲಿ ವಿಪ್ಷಕ ನಾಯಕ ಬಲ ಹೆಚ್ಚಿರುತ್ತದೆಯೋ ಅಲ್ಲಿ ಇಡಿ, ಸಿಬಿಐ, ಐಟಿಯಂತಹ ಉನ್ನತ ಸಂಸ್ಥೆಗಳಿಂದ ದಾಳಿ ಮಾಡಿಸುವ ಸಂಚು ರೂಪಿಸಲಾಗುತ್ತದೆ.

ಈ ಹಿಂದೆ ತಮಿಳುನಾಡಿನ ಹಾಲಿ ಸಿಎಂ ಸ್ಟಾಲಿನ್, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಯ ಬಂಧು-ಬಳಗದವರ ಮನೆ ಮೇಲೆ ದಾಳಿ ಮಾಡಿಸಿ ಹೆದರಿಸುವ ತಂತ್ರ ಕೇಂದ್ರ ಸರ್ಕಾರ ಮಾಡಿತ್ತು ಎಂದರು.

ಕರ್ನಾಟಕದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಕಾಂಗ್ರೆಸ್ ಪಕ್ಷದ ಉನ್ನತ ನಾಯಕರ ಮನೆ ಮೇಲೆ ದಾಳಿ ಮಾಡಿಸಲಾಗುತ್ತಿದೆ. ಬಿಜೆಪಿಯ ಇಂತಹ ಕುತಂತ್ರಗಳಿಂದಾಗಿಯೇ 2023ರಲ್ಲಿ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ನಿಚ್ಚಳ ಬಹುಮತ ಪಡೆಯಲಿದೆ ಎಂದು ತಿಳಿಸಿದರು.

ಓದಿ:ಎಸ್‌ಎಸ್‌ಎಲ್‌ಸಿಯಲ್ಲಿ ಎಲ್ಲರೂ ಪಾಸ್ : ಮುಂದಿನ ಶಿಕ್ಷಣಕ್ಕೆ ಸೀಟು ಸಿಕ್ಕರೂ, ಪಾಠ ಮಾಡೋಕೆ ಯಾರೂ ಇಲ್ಲ

ABOUT THE AUTHOR

...view details