ಕೊಪ್ಪಳ: ಇಂದುಜಿಲ್ಲೆಯ ಒಟ್ಟು ಎಂಟು ಕೇಂದ್ರಗಳಲ್ಲಿ ಕೊರೊನಾ ವ್ಯಾಕ್ಸಿನ್ ಡ್ರೈ ರನ್ ನಡೆಯಿತು.
ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಎಎನ್ಎಂ ಸೆಂಟರ್, ಕೆ.ಎಸ್. ಆಸ್ಪತ್ರೆ, ಶ್ರೀ ಗವಿಸಿದ್ದೇಶ್ವರ ಆಯುರ್ವೇದ ಕಾಲೇಜು, ಇರಕಲ್ ಗಡಾ ಪ್ರಾಥಮಿಕ ಆರೋಗ್ಯ ಕೇಂದ್ರ, ಕುಷ್ಟಗಿ ತಾಲೂಕಿನ ಹನುಮಸಾಗರ, ಗಂಗಾವತಿ ನಗರ ಹಾಗೂ ಯಲಬುರ್ಗಾ ತಾಲೂಕಿನ ಮಂಗಳೂರು ಗ್ರಾಮದಲ್ಲಿನ ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ಜಿಲ್ಲೆಯ ಒಟ್ಟು ಎಂಟು ಕೇಂದ್ರಗಳಲ್ಲಿ ಕೊರೊನಾ ವ್ಯಾಕ್ಸಿನ್ ಡ್ರೈರನ್ ನಡೆಸಲಾಯ್ತು.
ಪ್ರತಿಯೊಂದು ಕೇಂದ್ರದಲ್ಲಿ 25 ಜನ ಆರೋಗ್ಯ ಕಾರ್ಯಕರ್ತರು ನೋಂದಾಯಿತರಾಗಿದ್ದು, ಡ್ರೈ ರನ್ನಲ್ಲಿ ಪಾಲ್ಗೊಂಡರು. ವ್ಯಾಕ್ಸಿನ್ ಡ್ರೈ ರನ್ ಕೇಂದ್ರಗಳಲ್ಲಿ ಮೊದಲು ನೋಂದಾಯಿಸಿಕೊಂಡ ಆರೋಗ್ಯ ಕಾರ್ಯಕರ್ತರ ಮಾಹಿತಿ ಪಡೆದುಕೊಂಡು ಅವರನ್ನು ನಿರೀಕ್ಷಣಾ ಕೊಠಡಿಗೆ ಕಳಿಸಲಾಯಿತು. ಅಲ್ಲಿಂದ ವ್ಯಾಕ್ಸಿನೇಷನ್ ಕೊಠಡಿಗೆ ಕರೆದುಕೊಂಡು ವ್ಯಾಕ್ಸಿನ್ ಬಗ್ಗೆ ಮಾಹಿತಿ ನೀಡಿ ಲಸಿಕೆ ಹಾಕುವ ಮಾದರಿ ಪ್ರಕ್ರಿಯೆ ನಡೆಯಿತು. ಬಳಿಕ ಅವರನ್ನು ನಿಗಾ ಕೊಠಡಿಗೆ ಕಳಿಸಿ ಅಲ್ಲಿ ವ್ಯಾಕ್ಸಿನ್ ಪಡೆದ ವ್ಯಕ್ತಿಗೆ ಯಾವುದಾದರೂ ಅಡ್ಡ ಪರಿಣಾಮವಾಗುತ್ತಿದೆಯಾ ಎಂಬುದರ ಬಗ್ಗೆ ಅರ್ಧ ಗಂಟೆ ಕಾಲ ನಿಗಾ ಇಡಲಾಯಿತು. ಯಾವುದೇ ಅಡ್ಡಪರಿಣಾಮ ಕಂಡು ಬರದಿದ್ದರೆ ಅವರನ್ನು ಅಲ್ಲಿಂದ ಕಳಿಸಲಾಯಿತು.
ಈ ಪ್ರಕ್ರಿಯೆಯನ್ನು ಮುಂದಿನ ದಿನಗಳಲ್ಲಿ ನಿಜವಾಗಿ ವ್ಯಾಕ್ಸಿನ್ ನೀಡುವ ಸಂದರ್ಭದಲ್ಲಿ ಅನುಸರಿಸಲಾಗುತ್ತದೆ. ಇಂದು ಡ್ರೈರನ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಭೇಟಿ ನೀಡಿ ಮಾಹಿತಿ ಪಡೆದರು.
ಇದನ್ನೂ ಓದಿ:ಅರಣ್ಯ ರಕ್ಷಕರಿಗೆ ಬಂದೂಕು, ಜಾಕೆಟ್ ನೀಡಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ