ಕೊಪ್ಪಳ:ನಗರದ ಚಿತ್ರಮಂದಿರಗಳಲ್ಲಿಲೈಸನ್ಸ್ ಬಾರದ ಹಿನ್ನೆಲೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರ ಪ್ರದರ್ಶನ ಸ್ಥಗಿತಗೊಂಡಿದೆ.
ಕೊಪ್ಪಳದಲ್ಲಿ ಕೋಟಿಗೊಬ್ಬ 3 ಬಿಡುಗಡೆ ಸ್ಥಗಿತ .. ಕಾರಣ? - ಕೊಪ್ಪಳ ಜಿಲ್ಲಾ ಸುದ್ದಿ
ಕೋಟಿಗೊಬ್ಬ 3 ಸಿನಿಮಾ ಪ್ರದರ್ಶನಕ್ಕೆ ವಿಘ್ನ ಎದುರಾಗಿದೆ. ಇಂದು ಚಿತ್ರ ಪ್ರದರ್ಶನಕ್ಕೆ ಅನುಮತಿ ಸಿಗದ ಕಾರಣ ಕೊಪ್ಪಳದ ಶಾರದಾ ಹಾಗೂ ಶಿವ ಚಿತ್ರಮಂದಿರದ ಬಳಿ ಸೇರಿದ್ದ ಸುದೀಪ್ ಅಭಿಮಾನಿಗಳು ಶೋ ನಡೆಸುವಂತೆ ಒತ್ತಾಯಿಸಿದರು.
![ಕೊಪ್ಪಳದಲ್ಲಿ ಕೋಟಿಗೊಬ್ಬ 3 ಬಿಡುಗಡೆ ಸ್ಥಗಿತ .. ಕಾರಣ? kotigobba-3](https://etvbharatimages.akamaized.net/etvbharat/prod-images/768-512-13352712-thumbnail-3x2-dkdk.jpg)
ಕೋಟಿಗೊಬ್ಬ 3
ಕೋಟಿಗೊಬ್ಬ 3 ಸಿನಿಮಾ ಪ್ರದರ್ಶನ ರದ್ದು
ಪಟ್ಟಣದ ಶಾರದಾ ಹಾಗೂ ಶಿವ ಚಿತ್ರಮಂದಿರದಲ್ಲಿ ಕೋಟಿಗೊಬ್ಬ 3 ನಿಸಿಮಾ ಇಂದು ಬಿಡುಗಡೆಯಾಗಬೇಕಿತ್ತು. ಆದರೆ ಪ್ರದರ್ಶನಕ್ಕೆ ಅನುಮತಿ ಬಾರದ ಹಿನ್ನೆಲೆ ಸಿನಿಮಾ ಪ್ರದರ್ಶನ ಇಲ್ಲ ಎಂದು ಚಿತ್ರಮಂದಿರದ ಗೇಟ್ಗಳನ್ನು ಬಂದ್ ಮಾಡಿ ಮಾಲೀಕರು ಬೋರ್ಡ್ ಹಾಕಿದ್ದಾರೆ.
ಇದರಿಂದ ತಮ್ಮ ನೆಚ್ಚಿನ ನಟನ ಸಿನಿಮಾ ನೋಡಲು ಬಂದಿದ್ದ ಕಿಚ್ಚನ ಅಭಿಮಾನಿಗಳು ಆಕ್ರೋಶಗೊಂಡು ಕಿಚ್ಚ ಕಿಚ್ಚ ಎಂದು ಕೂಗಿ ಚಿತ್ರ ಪ್ರದರ್ಶಿಸುವಂತೆ ಒತ್ತಾಯಿಸಿದರು.