ಕೊಪ್ಪಳ:ನಗರದ ಮೂರು ಖಾಸಗಿ ಆಸ್ಪತ್ರೆಗಳ ಮೂವರು ವೈದ್ಯರಿಗೆ ಕೊರೊನಾ ಸೋಂಕು ತಗುಲಿದೆ ಎಂದು ತಿಳಿದು ಬಂದಿದ್ದು, ಈ ಮೂರು ಆಸ್ಪತ್ರೆಗಳನ್ನು ಈಗಾಗಲೇ ಕ್ಲೋಸ್ ಮಾಡಲಾಗಿದೆ.
ಕೊಪ್ಪಳ: ಖಾಸಗಿ ಆಸ್ಪತ್ರೆಯ ಮೂವರು ವೈದ್ಯರಿಗೆ ಕೊರೊನಾ - Koppla private hospitals doctors tested corona positive
ನಗರದ ಸಿಂಪಿ ಲಿಂಗಣ್ಣ ರಸ್ತೆಯಲ್ಲಿರುವ ಎರಡು ಖಾಸಗಿ ಆಸ್ಪತ್ರೆಗಳ ಇಬ್ಬರು ವೈದ್ಯರಿಗೆ ಹಾಗೂ ಗಂಜ್ ಸರ್ಕಲ್ ಬಳಿಯ ಕುಷ್ಟಗಿ ರಸ್ತೆಯಲ್ಲಿರುವ ಒಂದು ಖಾಸಗಿ ಆಸ್ಪತ್ರೆಯ ವೈದ್ಯರಿಗೆ ಕೊರೊನಾ ಪಾಸಿಟಿವ್ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ.
ನಗರದ ಸಿಂಪಿ ಲಿಂಗಣ್ಣ ರಸ್ತೆಯಲ್ಲಿರುವ ಎರಡು ಖಾಸಗಿ ಆಸ್ಪತ್ರೆಗಳ ಇಬ್ಬರು ವೈದ್ಯರಿಗೆ ಹಾಗೂ ಗಂಜ್ ಸರ್ಕಲ್ ಬಳಿಯ ಕುಷ್ಟಗಿ ರಸ್ತೆಯಲ್ಲಿರುವ ಒಂದು ಖಾಸಗಿ ಆಸ್ಪತ್ರೆಯ ವೈದ್ಯರಿಗೆ ಕೊರೊನಾ ಪಾಸಿಟಿವ್ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಈ ಮೂರು ಆಸ್ಪತ್ರೆಗಳು ಇಂದು ಕ್ಲೋಸ್ ಆಗಿವೆ.
ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಬಂದಿದ್ದವರಿಗೆ ಈಗ ಭೀತಿ ಶುರುವಾಗಿದೆ. ಪಾಸಿಟಿವ್ ದೃಢಪಟ್ಟಿರುವ ಮೂರು ಖಾಸಗಿ ಆಸ್ಪತ್ರೆಗಳ ಪೈಕಿ ಓರ್ವ ವೈದ್ಯರು ಒಂದೇ ದಿನ ಸುಮಾರು ನೂರಕ್ಕೂ ಅಧಿಕ ರೋಗಿಗಳಿಗೆ ಚೆಕಪ್ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಈ ಆಸ್ಪತ್ರೆಗಳಿಗೆ ಭೇಟಿ ನೀಡಿದವರಲ್ಲಿ ಇದೀಗ ಭೀತಿ ಶುರುವಾಗಿದೆ.