ಗಂಗಾವತಿ(ಕೊಪ್ಪಳ) :ಸರ್ಕಾರದ ಅನುದಾನದಲ್ಲಿ ಅರೆಬರೆ ಕಾಮಗಾರಿ ಕೈಗೊಂಡು ಅನುದಾನ ದುರುಪಯೋಗ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಣ ಕೇಳಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಹಣಾಧಿಕಾರಿ ರಘುನಂದನ್ ಮೂರ್ತಿ ನಾಲ್ವರು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಪ್ರವಾಹ ಕಾಮಗಾರಿ ಭೋಗಸ್.. ಕಾರಣ ಕೇಳಿ ನಾಲ್ವರಿಗೆ ನೋಟಿಸ್ ನೀಡಿದ ಸಿಇಒ.. - Gangavathi Taluk of Koppal District
ಸರ್ಕಾರದ ಅನುದಾನ ದುರುಪಯೋಗ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ,ಕಾರಣ ಕೇಳಿ ಕೊಪ್ಪಳ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ರಘುನಂದನ್ ಮೂರ್ತಿ ನಾಲ್ವರು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
2019ರಲ್ಲಿ ಪ್ರವಾಹ ಬಂದ ಸಂದರ್ಭದಲ್ಲಿ ಕನಕಗಿರಿ ತಾಲೂಕು ಹಾಗೂ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡಿದ್ದ ಸುಮಾರು ನಾಲ್ಕು ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳು ಭೋಗಸ್ ಆಗಿದ್ದು, ಕೆಲಸ ಮಾಡದೇ ಹಣ ಲೂಟಿ ಮಾಡಲಾಗಿದೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಆರೋಪಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಪಂ ಸಿಇಒ ರಘುನಂದನ್ ಮೂರ್ತಿ,ಎಐಪಿಎಸ್ ನಿಡಗುಂದಿ ಎಂಬ ಥರ್ಡ್ ಪಾರ್ಟಿಯನ್ನ ತನಿಖೆಗೆ ನಿಯೋಜಿಸಿದ್ದರು.
ಇದೀಗ 3ನೇ ವ್ಯಕ್ತಿ ತನಿಖೆ ಕೈಗೊಂಡು ವರದಿ ನೀಡಿದ ಆಧಾರದ ಮೇಲೆ, ಜಿಲ್ಲಾ ಪಂಚಾಯತ್‌ನ ಎಂಜಿನಿಯರಿಂಗ್ ಇಲಾಖೆಯ ಕಾರ್ಯನಿರ್ವಹಕ ಎಂಜಿನಿಯರ್ ರಂಗಯ್ಯ ಬಡಿಗೇರ, ಗಂಗಾವತಿ ಉಪ ವಿಭಾಗದ ಆಗಿನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಸ್ ಎಸ್ ನಾಗೋಡ, ಕಿರಿಯ ಎಂಜಿನಿಯರ್ ಡಿ ಎಂ ರವಿ ಹಾಗೂ ಅಕೌಂಟೆಂಟ್ ನಾರಾಯಣಸ್ವಾಮಿ ಅವರಿಗೆ ನೋಟಿಸ್ ನೀಡಲಾಗಿದೆ.