ಕರ್ನಾಟಕ

karnataka

ETV Bharat / state

ಮಹಿಳೆಯಿಂದ ಬೈಕ್​​​ನಲ್ಲಿ ಏಕಾಂಗಿ 'ವಿಶ್ವ' ಪರ್ಯಟನೆ

ಭಾರತ ವೈಶಿಷ್ಟ್ಯತೆಯನ್ನು ಆಸ್ವಾದಿಸಲು ಮತ್ತು ನನ್ನ ಹವ್ಯಾಸವನ್ನು ಮಾಡಲು ಈ ಪರ್ಯಟನೆ ಆರಂಭಿಸಿದ್ದೇನೆ. ಪ್ರತೀ ರಾಜ್ಯದಲ್ಲೂ ಒಂದೆರೆಡು ತಿಂಗಳು ಇದ್ದು ಅಲ್ಲಿನ ಸಂಸ್ಕೃತಿ, ಸಂಪ್ರದಾಯಗಳನ್ನು ತಿಳಿಯುವ ಬಯಕೆ ಇದೆ ಎಂದು ಬೈಕ್​ ರೈಡರ್​ ಭಾರತಿ ಕೋಟ್ಲಾ ಹೇಳಿದ್ದಾರೆ.

women Started World tour On Bike
ಬೈಕ್​ ರೈಡರ್​ ಭಾರತಿ ಕೋಟ್ಲಾ

By

Published : May 9, 2022, 8:45 PM IST

ಗಂಗಾವತಿ:ಬೆಂಗಳೂರಿನ ನಿವಾಸಿಯಾಗಿರುವ ಬಳ್ಳಾರಿ ಮೂಲದ ಭಾರತಿ ಕೋಟ್ಲಾ ಎಂಬ ಇಂಜಿನಿಯರ್ ಮಹಿಳೆ, ಕಳೆದ ಒಂದು ವರ್ಷದಿಂದ ಬೈಕ್ ಮೂಲಕ ಭಾರತ, ಬಳಿಕ ವಿಶ್ವ ಪರ್ಯಟನೆಯ ಮಹತ್ವಾಕಾಂಕ್ಷಿ ಯೋಜನೆ ರೂಪಿಸಿಕೊಂಡು ದೇಶ ಪರ್ಯಟನೆ ಕೈಗೊಂಡಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಹೋಗುವ ಮಾರ್ಗ ಮಧ್ಯೆ ಕೊಪ್ಪಳಕ್ಕೆ ಆಗಮಿಸಿದ್ದ ಭಾರತಿ, ಗಂಗಾವತಿಯಲ್ಲಿ ಈ ಬಗ್ಗೆ ಮಾತನಾಡಿದರು.

ಕಳೆದ 2021ರ ಮಾರ್ಚ್ 27ರಂದು ಬೈಕ್ ಮೂಲಕ ಭಾರತ ಸುತ್ತುವ ಅಭಿಯಾನ ಆರಂಭಿಸಿದ್ದೇನೆ. ಈಗಾಗಲೇ ಜಮ್ಮು-ಕಾಶ್ಮೀರ ಸೇರಿದಂತೆ ಹತ್ತು ಹಲವು ರಾಜ್ಯಗಳಲ್ಲಿ ಸಂಚರಿಸಿದ್ದು, ಕಳೆದ ಒಂದು ವರ್ಷದಲ್ಲಿ 20 ಸಾವಿರ ಕಿ.ಮೀ. ಸಂಚರಿಸಿದ್ದೇನೆ. ಏಕಾಂಗಿಯಾಗಿ ದೇಶ ಸುತ್ತುತಿದ್ದು, ಒಂದು ರಾಜ್ಯಕ್ಕೆ ಹೋದರೆ ಅಲ್ಲಿ ಎರಡು ತಿಂಗಳು ಇದ್ದು, ಇಡೀ ರಾಜ್ಯ ಸುತ್ತುತ್ತೇನೆ ಅಂತಾರೆ ಭಾರತಿ.

ಮಹಿಳೆಯಿಂದ ಬೈಕ್​​ನಲ್ಲಿ ಏಕಾಂಗಿ 'ವಿಶ್ವ' ಪರ್ಯಟನೆ

ಈ ಮೂಲಕ ಸಂಪ್ರದಾಯ, ಸಂಸ್ಕೃತಿಯಲ್ಲಿ ವಿಭಿನ್ನವಾಗಿರುವ ಭಾರತ ವೈಶಿಷ್ಟ್ಯತೆಯನ್ನು ಅಸ್ವಾದಿಸುತ್ತಿದ್ದೇನೆ. ಮುಂದಿನ ನಾಲ್ಕು ವರ್ಷ ಭಾರತದಲ್ಲಿ ಸಂಚರಿಸುವ ಉದ್ದೇಶವಿದ್ದು, ಆ ಬಳಿಕ ಐದು ವರ್ಷ ವಿಶ್ವ ಪರ್ಯಟನೆಯ ಗುರಿ ಹೊಂದಿದ್ದೇನೆ. ಬೈಕ್ ರೈಡಿಂಗ್, ಟ್ರಕ್ಕಿಂ​ಗಾಗಿ ನನ್ನ ಸ್ವಂತ ಆಸ್ತಿ ಮಾರಾಟ ಮಾಡಿ ಬಂದಿರುವ ಹಣ ಬಳಸುತ್ತಿದ್ದೇನೆ ಎಂದರು.

ಇದನ್ನೂ ಓದಿ:ಪಿಯು ಪರೀಕ್ಷೆಯ ಕೊನೆಯ ದಿನ ತಾಯಿ ಕಣ್ತಪ್ಪಿಸಿ ಲವರ್​ ಜತೆ ವಿದ್ಯಾರ್ಥಿನಿ ಎಸ್ಕೇಪ್​!

ABOUT THE AUTHOR

...view details