ಗಂಗಾವತಿ(ಕೊಪ್ಪಳ):ತುಂಗಭದ್ರಾ ನದಿ ಪಾತ್ರದಲ್ಲಿ ಬರುವ ಗಂಗಾವತಿ ಮತ್ತು ಕಾರಟಗಿಯ ಒಂಭತ್ತು ಗ್ರಾಮ ಪಂಚಾಯತ್‌ಗಳ 23 ಗ್ರಾಮಗಳನ್ನು ಪ್ರವಾಹ ಪೀಡಿತ ಪ್ರದೇಶ ಎಂದು ಕೊಪ್ಪಳ ಜಿಲ್ಲಾಡಳಿತ ಘೋಷಣೆ ಮಾಡಿದೆ. ತಹಶೀಲ್ದಾರ್ ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳಿಗೆ ಅಲರ್ಟ್ ಇರುವಂತೆ ಸೂಚನೆ ನೀಡಲಾಗಿದೆ.
ಕೊಪ್ಪಳದ ಎರಡು ತಾಲೂಕಿನ 9 ಗ್ರಾಮ ಪಂಚಾಯತ್‌ಗಳು ಪ್ರವಾಹ ಪೀಡಿತ - Letter from Koppal District Collector Vikas Kishore Suralarkar
ಗಂಗಾವತಿ ತಾಲೂಕಿನ ಸಂಗಾಪುರ, ಸಣಾಪುರ, ಚಿಕ್ಕಜಂತಕಲ್, ಆನೆಗೊಂದಿ, ಢಣಾಪುರ ಹಾಗೂ ಕಾರಟಗಿ ತಾಲೂಕಿನ ಉಳೇನೂರು, ಮುಸ್ಟೂರು, ಬರಗೂರು ಮತ್ತು ಬೆನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಕಟ್ಟೆಚ್ಚರವಹಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ..
ಈ ಬಗ್ಗೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಪತ್ರ ಬರೆದಿದ್ದು, ತುಂಗಭದ್ರಾ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ಹೆಚ್ಚುವರಿ ನೀರು ನದಿಗೆ ಹರಿಸುವ ಸಾಧ್ಯತೆ ಇರುವ ಹಿನ್ನೆಲೆ ಸೂಚಿತ ಪಂಚಾಯತ್‌ಗಳ ಗ್ರಾಮಗಳಲ್ಲಿ ಜನ ಮತ್ತು ಜಾನುವಾರುಗಳಿಗೆ ಮುಂಜಾಗ್ರತಾ ಕ್ರಮವಾಗಿ ಪ್ರವಾಹದ ಮೂನ್ಸೂಚನೆ ನೀಡುವಂತೆ ಆದೇಶಿಸಿದ್ದಾರೆ.
ಗಂಗಾವತಿ ತಾಲೂಕಿನ ಸಂಗಾಪುರ, ಸಣಾಪುರ, ಚಿಕ್ಕಜಂತಕಲ್, ಆನೆಗೊಂದಿ, ಢಣಾಪುರ ಹಾಗೂ ಕಾರಟಗಿ ತಾಲೂಕಿನ ಉಳೇನೂರು, ಮುಸ್ಟೂರು, ಬರಗೂರು ಮತ್ತು ಬೆನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಕಟ್ಟೆಚ್ಚರವಹಿಸುವಂತೆ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ.
TAGGED:
ಕೊಪ್ಪಳ ಜಿಲ್ಲಾಡಳಿತ ಘೋಷಣೆ