ಕರ್ನಾಟಕ

karnataka

ETV Bharat / state

ಬಿಜೆಪಿ ಒಗ್ಗಟ್ಟಿನ ಪಕ್ಷ ಕಾಂಗ್ರೆಸ್ಸಿಗರ ಹಾಗೆ ನಮ್ಮಲ್ಲಿ ಒಳಜಗಳವಿಲ್ಲ: ಸಿಎಂ​ ಬೊಮ್ಮಾಯಿ - Etv Bharat Kannada

ಕಾಂಗ್ರೆಸ್ಸಿನವರಿಗೆ ಇದ್ದ ಹಾಗೆ ನಮ್ಮಲ್ಲಿ ಒಳಜಗಳವಿಲ್ಲ ನಮ್ಮದು ಒಗ್ಗಟ್ಟಿನ ಪಕ್ಷ ಎಂದು ಇಂದು ನಡೆದ ಜನಸಂಕಲ್ಪ ಯಾತ್ರೆಯ ನಂತರ ಸಿಎಂ ಹೇಳಿದರು.

KN_KPL_
ಬಸವಾರಜ್​ ಬೊಮ್ಮಾಯಿ

By

Published : Oct 12, 2022, 9:26 PM IST

Updated : Oct 12, 2022, 9:53 PM IST

ಕೊಪ್ಪಳ: ನಮ್ಮದು ಒಗ್ಗಟ್ಟಿನ ಪಕ್ಷ, ನಾವು ಒಗ್ಗಟ್ಟಿನಿಂದ ಹೋಗುತ್ತೇವೆ. ಯಡಿಯೂರಪ್ಪ ನಮ್ಮ ನಾಯಕರು. ಕಾಂಗ್ರೆಸ್ಸಿಗರಂತೆ ಒಳಜಗಳ ಒಬ್ಬರ ಮೇಲೆ ಇನ್ನೊಬ್ಬರು ಮಾತನಾಡೋದು ನಮ್ಮಲ್ಲಿ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಜನಸಂಕಲ್ಪ ಯಾತ್ರೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮದು ಒಗ್ಗಟಿನ ಪಕ್ಷ, ನಾವು ಕಾಂಗ್ರೆಸ್ಸಿಗರಂತೆ ನಮ್ಮಲ್ಲಿ ಒಳಜಗಳವಿಲ್ಲ ಎಂದರು. ಇನ್ನು ರಾಜ್ಯದಲ್ಲಿ ಅತಿಯಾದ ಮಳೆಯಾಗಿದ್ದು, ಕೊಪ್ಪಳದಲ್ಲಿಯೂ ಮಳೆಯಿಂದಾಗಿ ಹಾನಿ ಉಂಟಾಗಿದೆ. ಈ ಕುರಿತು ಮಾಹಿತಿ ಪಡೆದು ಅಕ್ಟೋಬರ್ 30ರೊಳಗಾಗಿ ಮಳೆ ಹಾನಿ ಪರಿಹಾರ ನೀಡಲಾಗುವುದು ಎಂದರು.

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಜಿಲೆಯಲ್ಲಿ ಮಳೆ ಹೆಚ್ಚಾಗಿ ಹಳ್ಳದಲ್ಲಿ ಕೊಚ್ಚಿಹೋಗಿ ಆರಜನರು ಸಾವನ್ನಪ್ಪಿದ್ದರೂ ಭೇಟಿ ನೀಡುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತ್ರಿಕ್ರಿಯಿಸಿದ ಅವರು, ಆನಂದ ಸಿಂಗ್ ಆಗಾಗ ಬಂದಿದ್ದಾರೆ. ಕೆಲವು ಸಂದರ್ಭಗಳಲ್ಲಿ ಬಂದಿರಲಿಕ್ಕಿಲ್ಲ ಎಂದು ಸ್ಪಷ್ಟನೆ ನೀಡಿದರು.

ಇನ್ನು ಕೊಪ್ಪಳ ಅಕ್ರಮ ರೇಸಾರ್ಟ್ ಕುರಿತು ಪ್ರತ್ರಿಕ್ರಿಯಿಸಿ ಈ ಕುರಿತು ಮಾಹಿತಿ ತೆಗೆದುಕೊಳ್ಳುತ್ತೇನೆ ಎಂದರು. ಬಳಿಕ ಮೋದಿ ಅವರಿಗೆ ಮಾಧ್ಯಮಗಳು ಕೇಳುವ ಪ್ರಶ್ನೆಗೆ ಉತ್ತರಿಸುವ ಶಕ್ತಿ ಇಲ್ಲ ಎಂದು ಸಿದ್ದರಾಮಯ್ಯ ಹೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಹಾಸ್ಯಾಸ್ಪದ ಈ ಹಿಂದೆ ಸೋನಿಯಾ ಗಾಂಧಿ ಮೋದಿಯವರನ್ನು ಮೌತ್ ಕಾ ಸೌಧಾಗರ್ (ಸಾವಿನ ವ್ಯಾಪಾರಿ)​ ಎಂದು ಟೀಕಿಸಿದ್ದರು, ಇಂದು ಮೋದಿ ಅವರು ದೇಶದ ಪ್ರಧಾನಿಯಾಗಿದ್ದಾರೆ ಎಂದರು.

ಇದನ್ನೂ ಓದಿ:ಪ್ರಮುಖ ವಿಮಾನ ನಿಲ್ದಾಣಗಳನ್ನು ರಾಜ್ಯಕ್ಕೆ ವಹಿಸುವಂತೆ ಕೇಂದ್ರಕ್ಕೆ ಮನವಿ ಮಾಡಲು ಸರ್ಕಾರ ನಿರ್ಧಾರ!

Last Updated : Oct 12, 2022, 9:53 PM IST

ABOUT THE AUTHOR

...view details