ಕರ್ನಾಟಕ

karnataka

ETV Bharat / state

ಕೊಪ್ಪಳದಲ್ಲಿ ಯುವಕನ ಶವ ಪತ್ತೆ ಪ್ರಕರಣ: ಅಕ್ರಮ ಸಂಬಂಧದ ಗುಟ್ಟು ರಟ್ಟು - Koppala boy dead case news

ಇತ್ತೀಚೆಗೆ ಶವವಾಗಿ ಪತ್ತೆಯಾಗಿದ್ದ ಗುರುರಾಜ್​ ಉರುಫ್​​ ಗುರಪ್ಪನ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಯಲಬುರ್ಗಾ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಓರ್ವ ಬಂಧನ

By

Published : Oct 19, 2019, 1:22 PM IST

ಕೊಪ್ಪಳ: ಇತ್ತೀಚೆಗೆ ಶವವಾಗಿ ಪತ್ತೆಯಾಗಿದ್ದ ಗುರುರಾಜ್​ ಉರುಫ್‌​​ ಗುರಪ್ಪನ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಯಲಬುರ್ಗಾ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಕುದರಿಕೊಟಗಿ ಗ್ರಾಮದ ಹೊರವಲಯದಲ್ಲಿರುವ ಕೆರೆಯಲ್ಲಿ ಇತ್ತೀಚಿಗೆ ಯುವಕನ ಶವ ಪತ್ತೆಯಾಗಿತ್ತು. ಸಾವಿನ ಕುರಿತಂತೆ ಮೃತನ ಮನೆಯವರು ಅನುಮಾನ ವ್ಯಕ್ತಪಡಿಸಿದ್ದರು. ಪ್ರಕರಣದ ಜಾಡು ಹಿಡಿದ ಯಲಬುರ್ಗಾ ಪೊಲೀಸರು ಅದೇ ಗ್ರಾಮದ ಮುತ್ತಪ್ಪ ಬಸವರಾಜ ಡಗಲಿ ಎಂಬಾತನನ್ನು ಬಂಧಿಸಿದ್ದಾರೆ.

ಕೊಪ್ಪಳ: ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆ

ತನ್ನ ಪತ್ನಿಯೊಂದಿಗೆ ಗುರಪ್ಪ ಅನೈತಿಕ ಸಂಬಂಧ ಹೊಂದಿದ್ದ. ಈ ಹಿನ್ನೆಲೆಯಲ್ಲಿ ಆತನ ಮೇಲೆ ದ್ವೇಷವಿತ್ತು. ಹೀಗಾಗಿ, ಇದೇ ಅಕ್ಟೋಬರ್ 7 ರಂದು ಸಂಜೆ ಊಟಕ್ಕೆ ಕರೆದುಕೊಂಡು ಹೋಗಿದ್ದೆ. ಆತನಿಗೆ ಕಂಠಪೂರ್ತಿ ಕುಡಿಸಿ ಕೊಲೆ ಮಾಡಿ ಬಳಿಕ ಶವವನ್ನು ಕೆರೆಯಲ್ಲಿ ಬಿಸಾಕಿದೆ ಎಂದು ಆರೋಪಿ ಮುತ್ತಪ್ಪ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

ABOUT THE AUTHOR

...view details